Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಮಾಡಿಕೊಂಡು ತಾನೊಬ್ಬ ಲೆಸ್ಬಿಯನ್ ಎಂದು ಸುಳ್ಳು ಹೇಳಿಕೊಂಡು ಈ ಯುವಕ ಮಾಡುತ್ತಿದ್ದ ಕೆಲಸ ಮಾತ್ರ ಬೆಚ್ಚಿ ಬೀಳಿಸುವಂತಿದೆ.
21 ವರ್ಷದ ಬೆಂಗಳೂರು ಮೂಲದ ಪ್ರಪಂಚ್ ನಾಚಪ್ಪ ಎಂಬಾತ ನಕಲಿ ಖಾತೆ ಮಾಡಿಕೊಂಡು ಯುವತಿಯರ ಸ್ನೇಹ ಸಂಪಾದಿಸುತ್ತಿದ್ದ. ಬಳಿಕ ಅವರಿಂದ ನಗ್ನ ಫೋಟೋಗಳನ್ನು ಪಡೆದುಕೊಂಡು ಅದನ್ನು ತೋರಿಸಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ.
ಈಗಾಗಲೇ 30-40 ಯುವತಿಯರಿಂದ 2 ಲಕ್ಷದವರೆಗೆ ಹಣ ಪೀಕಿದ್ದ ಎಂದು ತಿಳಿದುಬಂದಿದೆ. ಇದೀಗ ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.