Publish Date: Sat, 12 Nov 2022 (13:49 IST)
Updated Date: Sat, 12 Nov 2022 (13:56 IST)
ಹಿಟ್ ಆ್ಯಂಡ್ ರನ್ ಗೆ ಅಪರಿಚಿತ ವ್ಯಕ್ತಿ ಬಲಿಯಾಗಿದ್ದಾನೆ.ಟ್ಯಾಂಕರ್ ನಿಂದ ಹಿಟ್ ಆ್ಯಂಡ್ ರನ್ ನಡೆದಿದ್ದು, ಕ್ಯಾಂಟರ್ ಡಿಕ್ಕಿ ಹೊಡೆದು ಪರಾರಿಯಾಗಿದೆ.ಹಿಟ್ ಆ್ಯಂಡ್ ರನ್ ದೃಶ್ಯ ಕಾರ್ ಕ್ಯಾಮರಾದಲ್ಲಿ ಸೆರೆಯಾಗಿದೆ.ಕಲ್ಯಾಣನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ನಡು ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದ .ಅತಿವೇಗದಲ್ಲಿ ಕ್ಯಾಂಟರ್ ಚಲಿಸುತ್ತಿತ್ತು.ನೆನ್ನೆ ರಾತ್ರಿ 11 ಗಂಟೆಯ ಸಂಧರ್ಭದಲ್ಲಿ ಘಟನೆ ನಡೆದಿದೆ.ಪ್ರಕರಣ ಸಂಬಂಧ ಬಾಣಸ್ವಾಡಿ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.23 ವರ್ಷದ ಯುವಕ ಬಾಪಿ ಕಮರಾ ಸಾವನ್ನಪ್ಪಿದಾನೆ.ಖಾಸಗಿ ಕಂಪನಿಯಲ್ಲಿ ಯುವಕ ಕೆಲಸ ಮಾಡ್ತಾ ಇದ್ದ.ಕೆಲಸ ಮುಗಿಸಿ 11 ಗಂಟೆಗೆ ಮನೆಗೆ ಹೋಗ್ತಾ ಇದ್ದ.ಈ ವೇಳೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.ಆದ್ರೆ ಯಾವ ವಾಹನ ಡಿಕ್ಕಿ ಹೊಡೆದಿದೆ ಅನ್ನೋದು ಗೊತ್ತಿಲ್ಲ.ಅಪಘಾತ ಆದ ಬಳಿಕ ಮತ್ತೊಂದು ವಾಹನ ಕಮರಾನ ಮೇಲೆ ಹರಿದಿದೆ.ಈ ದೃಶ್ಯ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದೆ.ಸದ್ಯ ರಸ್ತೆಯುದ್ದಕ್ಕೂ ಇರೋ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ.ಈಗ ಬಾಣಸವಾಡಿ ಸಂಚಾರಿ ಪೊಲೀಸರಿದ ತನಿಖೆ ನಡೆಯುತ್ತಿದೆ.