ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ರೋಗ ನಿರೋಧಕ ಔಷಧಿ ವಿತರಣೆ ಮಾಡಲಾಗಿದೆ.
ಕೊರೋನಾ ವೈರಸ್ ತಡೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯಿಂದ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿದಂತೆ ಒಟ್ಟು 450 ಜನರಿಗೆ ಯುನಾನಿ, ಆಯುರ್ವೇದ ಹಾಗೂ ಹೋಮಿಯೋಪತಿ ರೋಗ ನಿರೋಧಕ ಔಷಧಿಗಳನ್ನು ಸಂಸ್ಥೆಯ ಘಟಕ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ವಿತರಿಸಲಾಯಿತು.
ಕೋವಿಡ್-19 ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯುನಾನಿ ಔಷಧಿಯಾದ ಆರ್ಕೆ ಅಜೀಬ್, ಆಯುರ್ವೇದ ಔಷಧಿ ಷಂಶಮನಿ ವಾಟಿ ಮತ್ತು ಹೋಮಿಯೋಪತಿ ಔಷಧಿ ಆರ್ಸೆನಿಕ ಆಲ್ಬಮ್ ಔಷಧಿಗಳನ್ನು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉಚಿತವಾಗಿ ವಿತರಿಸಲಾಯಿತು.