Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಸಂಸ್ಥೆಗೆ ನಾಲ್ಕು ಅಧ್ಯಕ್ಷರು ಬೇಡವಂತೆ; ಡಿಸಿಎಂ ಹೇಳಿದ್ದೇನು?

ಈ ಸಂಸ್ಥೆಗೆ ನಾಲ್ಕು ಅಧ್ಯಕ್ಷರು ಬೇಡವಂತೆ; ಡಿಸಿಎಂ ಹೇಳಿದ್ದೇನು?
ಬೆಂಗಳೂರು , ಗುರುವಾರ, 27 ಜೂನ್ 2019 (17:15 IST)
ಈ ಸಂಸ್ಥೆಯಲ್ಲಿ ನಾಲ್ಕು ಅಧ್ಯಕ್ಷರಿದ್ದಾರೆ. ಆದರೆ ಒಬ್ಬರೇ ಅಧ್ಯಕ್ಷರನ್ನು ನೇಮಕ ಮಾಡಬೇಕು. ಹೀಗಂತ ಉಪ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.

ಸದಾಶಿವನಗರದಲ್ಲಿ  ಡಿಸಿಎಂ ಜಿ.ಪರಮೇಶ್ವರ್ ಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ್ದಾರೆ ಸಾರಿಗೆ ಇಲಾಖೆ ನೌಕರರ ಸಂಘಟನೆಗಳ ಮುಖಂಡರು.

ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ನಿಯೋಗದಿಂದ ಡಿಸಿಎಂಗೆ ಮನವಿ ಸಲ್ಲಿಕೆ ಮಾಡಿದೆ.

ಸಾರಿಗೆ ನೌಕರರ ಮನವಿ ಪತ್ರ ಸ್ವೀಕರಿಸಿದ ಬಳಿಕ ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ನಾಲ್ಕು ಅಧ್ಯಕ್ಷರನ್ನ ನೇಮಿಸುವ ಬದಲು ಒಬ್ಬರನ್ನೇ ನೇಮಿಸಿ. ಸಾರಿಗೆ ಸಂಸ್ಥೆ ಸಂಪೂರ್ಣ ನಷ್ಟದಲ್ಲಿದೆ.

ವಿದ್ಯಾರ್ಥಿಗಳ ಉಚಿತ ಪಾಸ್ ನಿಂದಾದ ನಷ್ಟವನ್ನ ಸಾರಿಗೆ ಸಂಸ್ಥೆಗೆ ಸರ್ಕಾರವೇ ಭರಿಸಬೇಕು ಎಂಬುದು ಸೇರಿದಂತೆ ಕೆಲವು ಬೇಡಿಕೆಗಳನ್ನ ನೌಕರರು ಇಟ್ಟಿದ್ದಾರೆ. ನಾನು ಅವರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.
ನಾಲ್ಕೈದು ಸಾವಿರ ಬಸ್ ಗಳನ್ನ ರೀಪ್ಲೇಸ್ ಮಾಡಬೇಕಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲೂರಿನಲ್ಲಿ ಬಿಸಿ ಬಿಸಿ ಸಭೆ ನಡೆಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ