ಮುಖ್ಯ ಮಂತ್ರಿ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು ಕಳೆದ 15 ವರ್ಷಗಳಲ್ಲಿ ಮಂಡನೆಯಾದ ಬಜೆಟ್‍ಗಳ ಪೈಕಿ ಈ ಬಜೆಟ್ ಅತ್ಯಂತ ಕೆಟ್ಟ ಬಜೆಟ್ ಎಂದು ಉಡುಪಿ ಶಾಸಕ ರಘುಪತಿ ಭಟ್ ಅಭಿಮತ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನಲ್ಲಿ ಬಜೆಟ್ ಮಂಡನೆಯಾದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ.
ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಬಜೆಟ್‍ನಲ್ಲಿ ಯಾವುದೇ ಯೋಜನೆ ಕಲ್ಪಿಸಿಲ್ಲ. ಕೇವಲ ತನ್ನ ಪಕ್ಷದ ಅಭ್ಯರ್ಥಿಗಳ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಬಜೆಟ್ ಕೇವಲ 3 ಜಿಲ್ಲೆಗಳಿಗೆ ಸೀಮಿತವಾಗಿದೆ. ವಿಶೇಷವಾಗಿ ಕರಾವಳಿ
ಭಾಗದ ಮೀನುಗಾರರಿಗೆ ಯಾವುದೇ ಯೋಜನೆ ನೀಡಿಲ್ಲ. ರೈತ ಸಾಲಮನ್ನಾ ಕೂಡಾ ಅಸಮರ್ಪಕವಾಗಿದೆ.
ಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ಠೇವಣಿ ಕಳೆದುಕೊಂಡಿರುವ ಕಾರಣಕ್ಕಾಗಿ ಬಜೆಟ್‍ನ ಮೂಲಕ ಕುಮಾರಸ್ವಾಮಿ
ಕರಾವಳಿ ಜನತೆಯೊಂದಿಗೆ ಸೇಡು ತೀರಿಸಿಕೊಂಡಿದ್ದಾರೆ. ಹೀಗಾಗಿ ಈ ಬಜೆಟ್‍ಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದ್ರು.