ಉಡುಪಿ, ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿನ್ನೆ ಮಧ್ಯಾಹ್ನ ದಿಂದ ಸುರಿಯುತ್ತಿರುವ ಮಳೆ ಮುಂದುವರಿದಿದ್ದು, ಜನರು ಹೈರಾಣಾಗಿದ್ದಾರೆ.
100 ಮಿಲಿಮೀಟರ್ ಸುರಿದ ಮಳೆ ದಾಖಲೆಯತ್ತ ಮುಂದುವರಿದಿದೆ.
ಕೆಲವೆಡೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು ಮತ್ತಷ್ಟು ಸಂಕಷ್ಟ ತಂದೊಡ್ಡಿವೆ.
ವಾಯು ಚಂಡಮಾರುತ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರದಲ್ಲಿ ಹೆಚ್ಚಿದ ಅಲೆಗಳ ಅಬ್ಬರ ಮಳೆ ಮೇಲೆ ಪರಿಣಾಮ ಬೀರಿದೆ.
ಸಮುದ್ರ ತೀರದಲ್ಲಿ ಜನರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
ಇನ್ನು, ಅರಬ್ಬಿ ಸಮುದ್ರದಲ್ಲಿ ಬಲವಾದ ಬಿರುಗಾಳಿ ಬೀಸುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದೆ. ಉಳ್ಳಾಲದಲ್ಲಿ ಕಡಲ್ಕೊರೆತ ಕೂಡ ತೀವ್ರಗೊಂಡಿದೆ. ಈ ಭಾಗದಲ್ಲಿ ಹಲವು ಮನೆಗಳು ಅಪಾಯದಲ್ಲಿವೆ . ಇಂದು ಸಂಜೆ 7 ಗಂಟೆಗೆ ಉಳ್ಳಾಲದ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ನ ಹಿಂಭಾಗದಲ್ಲಿ ಸಣ್ಣ ಕೋಣೆ ಕಡಲ್ಕೊರೆತ ಹಾವಳಿಗೆ ಸಿಲುಕಿ ಸಮುದ್ರ ಪಾಲಾಗಿದೆ. ಈ ದ್ರಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ.