Publish Date: Mon, 25 Apr 2022 (21:04 IST)
Updated Date: Mon, 25 Apr 2022 (21:07 IST)
ಚಲಿಸುತ್ತಿದ್ದ ಓಮಿನಿ ಕಾರು ಮೇಲೆ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರದ ಕುಂಬಾಪುರ ಗೇಟ್ ಬಳಿ ನಡೆದಿದೆ..ಘಟನೆಯಲ್ಲಿ ಮದ್ದೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಒಂದೇ ಕುಟುಂಬದ ಶೀಲ, ಗಾನವಿ, ಸಾನ್ವಿಗೆ ಗಂಭೀರ ಗಾಯಗಳಾಗಿದ್ದು, ಸುಂದ್ರೇಶ್, ತನ್ಮಯ್, ಮೃತ ದುರ್ದೈವಿಗಳಾಗಿದ್ದಾರೆ..ಗಾಯಗೊಂಡ ಮೂವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ..ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು..ಮರ ಬಿದ್ದ ಹಿನ್ನೆಲೆ ಬೆಂಗಳೂರು- ಮೈಸೂರು ಹೆದ್ಧಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸಿದ್ದು, ರಾಮನಗರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Geetha
Publish Date: Mon, 25 Apr 2022 (21:04 IST)
Updated Date: Mon, 25 Apr 2022 (21:07 IST)