Publish Date: Tuesday, 08 September 2020 (08:17 IST)
Updated Date: Tuesday, 08 September 2020 (08:19 IST)
ಗದಗ : ತನ್ನ ಸಹೋದರಿಯ ಜೊತೆ ಅನುಚಿತವಾಗಿ ವರ್ತಿಸಬೇಡಿ ಎಂದ ಯುವಕನನ್ನು ಸೋದರರಿಬ್ಬರು ಸೇರಿ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಮುಸ್ತಾಕ್ ಅಲಿ ನದಾಫ್(23)ಕೊಲೆಯಾದ ವ್ಯಕ್ತಿ. ದಾವಲ್ ಸಾಬ್ ಮತ್ತು ಮಹ್ಮದ್ ಅಲಿ ಕೊಲೆ ಮಾಡಿದ ಸಹೋದರರು. ಸೋದರರಿಬ್ಬರು ಸೇರಿ ಯುವತಿಯೊಬ್ಬಳಿಗೆ ಚುಡಾಯಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಯುವತಿಯ ಸಹೋದರ ಈ ಯುವಕರಿಬ್ಬರ ಬಳಿ ಬಂದು ಎಚ್ಚರಿಕೆ ನೀಡಿದ್ದಾನೆ. ಇದರಿಂದ ಅವರ ನಡುವೆ ಜಗಳ ನಡೆದು ಇಬ್ಬರು ಸೇರಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಈ ಬಗ್ಗೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಬ್ಬರನ್ನು ಪೊಲೀಸರು ಬಂಧಸಿದ್ದಾರೆ.