Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಾರ್ ನಲ್ಲಿ ಗಲಾಟೆ ಮಾಡಿಕೊಂಡು ಪ್ರಜ್ವಲ್ ಎಂಬ ಯುವಕನ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ಹರೀಶ್ ಮತ್ತು ಧೀರಜ್ ಬಂಧಿತ ಆರೋಪಿಗಳಾಗಿದ್ದು,ಅಕ್ಟೋಬರ್ 29 ರ ರಾತ್ರಿ ಬಾರ್ ನಲ್ಲಿ ಎರಡು ಗ್ಯಾಂಗ್ ನಡುವೆ ಗಲಾಟೆ ಆಗಿತ್ತು.ಅದೇ ಕೋಪದಲ್ಲಿ ಫಾಲೋ ಮಾಡಿ ಪ್ರಜ್ವಲ್ ಕೈ ಆರೋಪಿಗಳು ಕತ್ತರಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದಾರೆ.