ಮೈಸೂರು : `ವಿಧಾನ ಸೌಧದ ವೆಸ್ಟ್ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವೀಟರ್ ನಲ್ಲಿ ಬಿಜೆಪಿ ನಾಯಕ ಡಿವಿ ಸದಾನಂದಗೌಡರು ಕಾಂಗ್ರೆಸ್ ನ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.
ವಿಧಾನಸೌಧ ಕಚೇರಿಯಲ್ಲಿ ಗುತ್ತಿಗೆ ನೌಕರನ ಬಳಿ ಸಿಕ್ಕಿರುವ ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತನ್ನ ಸಿಬ್ಬಂದಿ ಬಳಿ ಸಿಕ್ಕಿದೆ ಎನ್ನಲಾದ ಹಣದ ಬಗ್ಗೆ ತನಿಖೆ ನಡೆಯಲಿ, ನಾನು ಸಿದ್ದ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಹೇಳಿದ್ದಾರೆ. ಬಿಜೆಪಿಯವರು ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿ ಮೊದಲು ಪುಟ್ಟರಂಗಶೆಟ್ಟಿ ಅವರ ಮೇಲಿನ ಆರೋಪ ಸಾಬೀತಾಗಲಿ ನಂತರ ಮುಂದಿನ ಕ್ರಮದ ಬಗ್ಗೆ ಪಕ್ಷ ತೀರ್ಮಾನಿಸಲಿದೆ' ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ ' ಮಾನ್ಯ ಶ್ರೀ ಸಿದ್ದರಾಮಯ್ಯನವರು ಪ್ರಶ್ನಾತೀತರು. ಪ್ರಶ್ನೆ ಕೇಳಿದರೆ ಗಾದೆ, ವ್ಯಾಕರಣ, ಸಂಧಿ ಸಮಾಸ ಶುರುವಾಗುತ್ತದೆ, ಇನ್ನು ಸಿಕ್ಕಿಹಾಕಿಕೊಂಡ ದುಡ್ಡಿನ ವಿಷಯ ಕೇಳಲೇಬೇಡಿ, ರಕ್ಷಣಾ ಗೋಡೆ ಕಟ್ಟಲು ಮತ್ತದೇ ಕಮಿಷಬ್ ಪಟಲಾಂ ಟೊಂಕ ಕಟ್ಟಿ ಸಿದ್ದವಾಗಿರುತ್ತದೆ, ಮುಲಾಜಿನ ಸರ್ಕಾರ' ಎಂದು ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.