Select Your Language

Notifications

webdunia
webdunia
webdunia
webdunia

Boycott Turkey: ಬೆಂಗಳೂರಿನಲ್ಲಿ ಟರ್ಕಿ ಮಾರ್ಬಲ್ ಗೂ ನಿಷೇಧ

Turkey, Pakistan

Krishnaveni K

ಬೆಂಗಳೂರು , ಶನಿವಾರ, 17 ಮೇ 2025 (09:59 IST)
Photo Credit: X
ಬೆಂಗಳೂರು: ಪಾಕಿಸ್ತಾನವನ್ನು ಬೆಂಬಲಿಸಿ ಭಾರತಕ್ಕೆ ವಿಶ್ವಾಸದ್ರೋಹವೆಗಿರುವ ಟರ್ಕಿಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಇದೀಗ ಬೆಂಗಳೂರಿನಲ್ಲಿ ಟರ್ಕಿ ಮಾರ್ಬಲ್ ಗೆ ನಿಷೇಧ ಹೇರಲಾಗಿದೆ.

ಟರ್ಕಿ ಮಾರ್ಬಲ್ ಗೆ ಬೆಂಗಳೂರು ಸೇರಿದಂತೆ ನಮ್ಮ ದೇಶದಲ್ಲಿ ಒಳ್ಳೆಯ ಬೇಡಿಕೆಯಿತ್ತು. ಆದರೆ ಈಗ ಬ್ಯಾನ್ ಟರ್ಕಿ ಅಭಿಯಾನ ಶುರುವಾಗಿದ್ದು ಬೆಂಗಳೂರಿಗೆ ಟರ್ಕಿ ಮಾರ್ಬಲ್ ಬರುವುದು ನಿಂತಿದೆ. ಇಲ್ಲಿನ ಮಾರ್ಬಲ್ ಮಾರಾಟಗಾರರು ಟರ್ಕಿ ಮಾರ್ಬಲ್ ಗಳನ್ನು ತರಿಸಿಕೊಳ್ಳುತ್ತಿಲ್ಲ.

ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರವನ್ನು ಒದಗಿಸಿ ಟರ್ಕಿ ವಿಶ್ವಾಸ ದ್ರೋಹವೆಸಗಿತ್ತು. ಈ ಹಿಂದೆ ಟರ್ಕಿಯಲ್ಲಿ ಪ್ರಾಕೃತಿಕ ವಿಕೋಪವಾದಾಗ ಮೊದಲು ಸಹಾಯ ಮಾಡಿದ್ದೇ ಭಾರತ. ಆದರೆ ಆ ಉಪಕಾರ ಸ್ಮರಣೆಯೂ ಇಲ್ಲದೇ ನಮ್ಮ ದೇಶಕ್ಕೆ ಬೆನ್ನ ಹಿಂದೆ ಚೂರಿ ಹಾಕಿದ ಟರ್ಕಿಗೆ ಈಗ ವ್ಯಾಪಾರ ವಾಣಿಜ್ಯ ವಹಿವಾಟುಗಳ ಮೂಲಕ ಭಾರತ ಏಟು ಕೊಡಲು ಮುಂದಾಗಿದೆ.

ಟರ್ಕಿಯಿಂದ ವರ್ಷಕ್ಕೆ ಆಮದು ಮಾಡಿಕೊಳ್ಳುವ ಮಾರ್ಬಲ್ ಬೆಲೆ 2000-3000 ಕೋಟಿ ರೂ.ಗಳಷ್ಟಾಗಿದೆ. ಇದೀಗ ಭಾರತದಲ್ಲಿ ಟರ್ಕಿ ಮಾರ್ಬಲ್ ಗಳು ಸಂಪೂರ್ಣವಾಗಿ ನಿಷೇಧವಾದರೆ ಆ ದೇಶದ ಆದಾಯಕ್ಕೆ ಅದು ದೊಡ್ಡ ಹೊಡೆತವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Indus Water treaty: ಸಿಂಧೂ ನದಿ ನೀರು ಬಿಡಿ ಎಂದ ಪಾಕಿಸ್ತಾನಕ್ಕೆ ಭಾರತ ಕೊಟ್ಟ ಉತ್ತರವೇನು ಗೊತ್ತಾ