Webdunia - Bharat's app for daily news and videos

Install App

ಫೋಟೋ ವಿವಾದದ ಬೆನ್ನಲ್ಲೇ TTD ಸ್ಪಷ್ಟನೆ

Webdunia
ಮಂಗಳವಾರ, 10 ಮೇ 2022 (19:56 IST)
ತಿರುಮಲಕ್ಕೆ ಕರ್ನಾಟಕದಿಂದ ತೆರಳಿದ್ದ ವಾಹನಗಳ ಮೇಲಿದ್ದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಫೋಟೋಗಳನ್ನು ತಿರುಮಲ- ತಿರುಪತಿ ದೇವಸ್ಥಾನ ಮಂಡಳಿ ಸಿಬ್ಬಂದಿ ತೆಗೆಸಿದ್ದು ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಈ ಕುರಿತು ಟಿಟಿಡಿ ಸ್ಪಷ್ಟನೆ ನೀಡಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಯಾವುದೇ ಧರ್ಮದ ಚಿಹ್ನೆ, ದೇವರು, ವ್ಯಕ್ತಿ, ರಾಜಕೀಯ ನಾಯಕರ ಫೋಟೋ, ಪಕ್ಷದ ಧ್ವಜದಂತಹ ವಸ್ತುಗಳನ್ನು ತರುವಂತಿಲ್ಲ ಎಂದು ಹೇಳಿದೆ..ತಿರುಮಲ ಪ್ರವೇಶಕ್ಕೂ ಮುನ್ನ ಅಲಿಪಿರಿಯಲ್ಲಿ ವಾಹನ ತಪಾಸಣೆ ನಡೆಸುವ ಸಿಬ್ಬಂದಿ ಈ ನಿಯಮವನ್ನು ವಾಹನಗಳಲ್ಲಿ ಇರುವವರಿಗೆ ತಿಳಿಸುತ್ತಾರೆ. ಸ್ಟಿಕ್ಕರ್‌ ಹಾಗೂ ಧ್ವಜಗಳು TTD ನಿಯಮಗಳಿಗೆ ವಿರುದ್ಧವಾಗಿರೋದ್ರಿಂದ ಅವನ್ನು ತೆಗೆಯಲು ಸೂಚನೆ ನೀಡುತ್ತಾರೆ. ಹೀಗಾಗಿ ದೇಗುಲದ ಈ ಮಹತ್ವದ ನಿಯಂತ್ರಣವನ್ನು ಭಕ್ತಾದಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಆಡಳಿತ ಮಂಡಳಿ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments