ಭಾರತದಲ್ಲಿ ಭಾರೀ ವಿವಾದ ಕೆರಳಿಸಿದ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ. ಈ ಚಿತ್ರ ಎರಡು ಕೋಮುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸುತ್ತದೆ ಎಂದು ಹೇಳಿದೆ.
೧೯೯೦ರ ದಶಕದಲ್ಲಿ ಹಿಂದೂ ಪಂಡಿತರ ಹತ್ಯೆ ಘಟನೆ ಆಧರಿಸಿದ ಕಥೆ ಹೊಂದಿರುವ ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಸಿಂಗಾಪುರ ಸರಕಾರ ನಿಷೇಧಿಸಿದೆ.
ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವ ಪ್ರಯತ್ನ ಕಾಣುತ್ತದೆ. ಈ ಚಿತ್ರದಲ್ಲಿ ಹಿಂದೂಗಳು ಶೋಷಣೆಗೆ ಒಳಗಾಗಿದ್ದು ಮತ್ತು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ನಡೆದಿದೆ. ಇದು ಯಾವುದೇ ವಿಷಯದಲ್ಲೂ ಸಾಮಾನತೆ ಸಾರುವುದಿಲ್ಲ ಎಂದು ಸಿಂಗಾಪುರ ಸರಕಾರ ಪ್ರಕಟಣೆಯಲ್ಲಿ ವಿವರಿಸಿದೆ.