ಜಯಲಲಿತಾ ಸಾವಿನ ಕುರಿತಂತೆ ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸುತ್ತಿದ್ದಂತೆ ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಬೆಳಗ್ಗೆಯೇ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ ಟಿಟಿವಿ ದಿನಕರನ್, ಶಶಿಕಲಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಿಎಂ ಪಳನಿಸ್ವಾಮಿ ಮತ್ತು ದಿನಕರನ್ ನಡುವಿನ ಸಂಬಂಧ ಹಳಸಿದ್ದು ಪರಸ್ಪರ ವಾಗ್ದಾಳಿ ನಡೆಸುತ್ತಿದ್ಧಾರೆ. ಇದರ ಬೆನ್ನಲ್ಲೇ ಜಯಲಲಿತಾ ಸಾವಿನ ತನಿಖೆಗೆ ಆದೇಶಿಸಿದ್ದು, ದಿನಕರನ್ ವಶದಲ್ಲಿದ್ದ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನ ಸ್ಮಾರಕ ಮಾಡಲು ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಗೆ ಕುರಿತಂತೆ ದಿನಕರನ್ ಚರ್ಚೆ ನಡೆಸಿರುವ ಸಾಧ್ಯತೆ ಇದೆ.
ದಿನಕರನ್ ಮತ್ತು ಶಶಿಕಲಾ ವಿರುದ್ಧದ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿಯೇ ಸಿಎಂ ಪಳನಿಸ್ವಾಮಿ, ಜಯಲಲಿತಾ ಸಾವಿನ ಪ್ರಕರಣವನ್ನ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ. ಅಣ್ಣಾಡಿಎಂಕೆ ಒಳಗಿನ ೀ ಗುದ್ದಾಗ ಯಾವ ಹಂತ ತಲುಪುತ್ತೋ ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ