Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಣ್ಣು ಮಗುವಿನ ಜೀವಂತ ಸಮಾಧಿಗೆ ಯತ್ನ!

ಹೆಣ್ಣು ಮಗುವಿನ ಜೀವಂತ ಸಮಾಧಿಗೆ ಯತ್ನ!
ಬೆಳಗಾವಿ , ಮಂಗಳವಾರ, 26 ಜೂನ್ 2018 (19:13 IST)
ಅದಿನ್ನೂ ಎರಡು ತಿಂಗಳ ಹಸುಗೂಸು. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬ ಅರಿವಿಲ್ಲದ ಪುಟ್ಟ ಜೀವ. ತನ್ನನ್ನು ಜೀವಂತವಾಗಿ ಹೂಳಲು ಹೊರಟಿದ್ದಾರೆ ಅನ್ನೋದು ಅರಿಯದೇ ಆ ಕಟುಕರ ಮುಖವನ್ನ ನೋಡಿ ನಗುವ ಮುಗ್ದ ಜೀವ,  ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು ಅನ್ನೋ ಮಾತು ಈ ಪುಟ್ಟ ಜೀವದ ಪಾಲಿಗೆ ಅಕ್ಷರಶಃ ನಿಜವಾಗಿಬಿಟ್ಟಿದೆ. ಏದೇನಿದು ವಿಚಿತ್ರ ಅಂತಿರಾ ಈ ಸ್ಟೋರಿ ನೋಡಿ.

ಸ್ಮಶಾನ ಕಾಯುವ ಕಾವಲುಗಾರ ಕೂಡ ಅಲರ್ಟ್ ಆಗದಿದ್ರೆ ಒಂದು ಜೀವವನ್ನೆ ಬದುಕಿಸಬಹುದು ಎಂಬುದಕ್ಕೆ ಈ ಸ್ಟೋರಿ ತಾಜಾ ಉದಾಹರಣೆ. ಹೆಣ್ಣು ಮಗುವೆಂಬ ಕಾರಣಕ್ಕೆ ಹೆತ್ತವರೇ ಮಗುವಿನ ಪಾಲಿಗೆ ರಾಕ್ಷಸತನ ಪ್ರದರ್ಶಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶಹಾಪುರದ ಸಾರ್ವಜನಿಕ ಸ್ಮಶಾನಕ್ಕೆ ಕಾರು ಹಾಗೂ ಆಟೋನಲ್ಲಿ ಬಂದಿಳಿದ ಕೆಲವರು ಬಿಳಿಬಟ್ಟೆಯಲ್ಲಿ ಎರಡು ತಿಂಗಳ ಹೆಣ್ಣು ಮಗುವೊಂದನ್ನ ಸುತ್ತಿಕೊಂಡು ಬಂದಿದ್ದರು. ಅಷ್ಟೇ ಅಲ್ಲದೇ ಮಗುವಿನ ಅಂತ್ಯಕ್ರಿಯೆಗೆ ಬೇಕಾಗುವ ಸಾಮಗ್ರಿಗಳನ್ನ ಕೂಡ ತಂದು ಗುಂಡಿ ತೋಡಿ ಮಗುವನ್ನ ಹೂಳಲು ರೆಡಿಯಾಗಿದ್ರು. ಆದ್ರೆ ಅಷ್ಟೋತ್ತಿಗಾಗಲೇ ಹೊಟ್ಟೆ ಹಸಿವಿನಿಂದ ಮಗು ಅಳಲಾರಂಭಿಸಿದೆ. ಮಗುವಿನ ಅಳುವ ಶಬ್ದ ಕಿವಿಗೆ ಬೀಳುತ್ತಿದ್ದಂತೆ ವಾಚಮನ್ ಹಾಗೂ ಸ್ಥಳೀಯರು ಓಡೋಡಿ ಬಂದಿದ್ದಾರೆ.

 ಇದೇನಿದು ಜೀವಂತ ಮಗುವನ್ನ ಹೂಳುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಂತೆ ಗಲಿಬಿಲಿ ಗೊಂಡ ಮಗುವಿನ ಪೋಷಕರು ಉತ್ತರಿಸಲು ತಡಬಡಾಯಿಸಿದ್ದಾರೆ. ಇನ್ನೇನು ಸಾರ್ವಜನಿಕರು ತಮ್ಮನ್ನ ಬಿಡಲ್ಲ ಅಂತ ಕನಫರ್ಮ ಆದಕೂಡಲೇ ಎಚ್ಚೆತ್ತ ಪೋಷಕರು ಮಗುವನ್ನ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಿದ್ದೇವು. ಮಗು ಬ್ರೇನ್ ಹೆಮರೈಜ್ನಿಂದ ಬಳಲುತ್ತಿದೆ. ವೈದ್ಯರು ಮಗು ಸಾವನ್ನಪ್ಪಿದೆ ಅಂತ ಹೇಳಿದ್ದಕ್ಕೆ ಅಂತ್ಯಕ್ರಿಯೆ ಮಾಡಲು ಬಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ. ಆದ್ರೆ ಅನುಮಾನಗೊಂಡ ಸ್ಥಳೀಯರು ಪದೇ ಪದೇ ಪ್ರಶ್ನಿಸುತ್ತಿದ್ದಂತೆ ಬಂದ ಕಾರಿನಲ್ಲಿ ಕಾಲ್ಕಿತ್ತಿದ್ದಾರೆ.

ಸ್ಮಶಾನ ಭೂಮಿ ವಾಚಮನ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೂರ ಪ್ರಾಣಿಗಳ ಹೆಜ್ಜೆ ಗುರುತು ಪತ್ತೆ; ರೈತರಲ್ಲಿ ಚಿಂತೆ