Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶೀಘ್ರದಲ್ಲಿಯೇ ರಣಬೀರ್ ಕಪೂರ್, ಆಲಿಯಾ ಭಟ್ ವಿವಾಹ

ಶೀಘ್ರದಲ್ಲಿಯೇ ರಣಬೀರ್ ಕಪೂರ್, ಆಲಿಯಾ ಭಟ್ ವಿವಾಹ
ಬೆಂಗಳೂರು , ಬುಧವಾರ, 20 ಜೂನ್ 2018 (16:00 IST)
ಬಾಲಿವುಡ್ ಚಿತ್ರ ನಿರ್ದೇಶಕ ಆಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್‌ನಲ್ಲಿ ಆರಂಭವಾಗಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಲವ್ವಿಡವ್ವಿ ಇದೀಗ ವಿವಾಹಕ್ಕೆ ಬಂದು ನಿಂತಿದ್ದು, ಶೀಘ್ರದಲ್ಲಿಯೇ ಇಬ್ಬರು ಹಸೆಮಣೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ ಮುಂಬರುವ 2020ರಲ್ಲಿ ನಡೆಯಲಿದ್ದು, ಇಬ್ಬರು ಸಮ್ಮತಿ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಆಲಿಯಾ ಭಟ್ ಇದೀಗ ಭರ್ಜರಿ ಸ್ವಿಂಗ್‌ನಲ್ಲಿದ್ದು ಯಶಸ್ವಿನ ತುತ್ತ ತುದಿಗೆ ತಲುಪಿದ್ದಾರೆ. ಆಲಿಯಾ ಮತ್ತು ರಣಬೀರ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ, 2020ರೊಗೆ ವಿವಾಹ ಸಾಧ್ಯವಿಲ್ಲ ಎನ್ನಲಾಗಿದೆ.
 
ಆಸಕ್ತಿಕರ ವಿಷಯವೆಂದರೆ, ರಣಬೀರ್ ಮತ್ತು ಆಲಿಯಾ ಭಟ್ ತಮ್ಮ ವಿವಾಹದ ಬಿಸಿ ಬಿಸಿ ಸುದ್ದಿಯ ಬಗ್ಗೆ ಚಕಾರವೆತ್ತದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎನ್ನುವ ಅಂಶಗಳನ್ನು ಕೆಲ ಬಾರಿ ಹೊರಹಾಕಿದ್ದಾರೆ.
 
ರಣಬೀರ್ ಕಪೂರ್ ಹೆಸರು ಆರಂಭದಲ್ಲಿ ಸೋನಮ್ ಕಪೂರ್‌ಳೊಂದಿಗೆ ಕಾಣಿಸಿಕೊಂಡಿತ್ತು. ನಂತರ ದೀಪಿಕಾ ಪಡುಕೋಣೆ, ತದ ನಂತರ ಕತ್ರೀನಾ ಕೈಫ್ ಸೇರಿದಂತೆ ಕೆಲ ನಟಿಯರೊಂದಿಗೆ ಡೇಟಿಂಗ್ ನಡೆಸಿದ್ದಾರೆ ಎನ್ನಲಾಗುತ್ತಿತ್ತು.
 
ಮತ್ತೊಂದೆಡೆ, ಆಲಿಯಾ ಭಟ್ ಕೂಡಾ ತಾನೇನು ಕಮ್ಮಿಯಿಲ್ಲವೆನ್ನುವಂತೆ ಸಿದ್ಧಾರ್ಥ ಮಲ್ಹೋತ್ರಾರೊಂದಿಗೆ ಡೇಟಿಂಗ್ ನಡೆಸಿದ್ದಾಳೆ ಎನ್ನಲಾಗಿತ್ತು. 25 ವರ್ಷ ವಯಸ್ಸಿನ ಆಲಿಯಾ ಮತ್ತು 35 ವರ್ಷದ ರಣಬೀರ್ ಕಪೂರ್ ವಿವಾಹ ವರದಿಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮುಂದೇನುಗುತ್ತದೆಯೋ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ನಿಕ್ ಜೋನಸ್ ಸೋದರಸಂಬಂಧಿಯ ವಿವಾಹದಲ್ಲಿ ಹಾಜರಾದ ಪ್ರಿಯಾಂಕಾ