Publish Date: Tue, 03 Sep 2019 (18:03 IST)
Updated Date: Tue, 03 Sep 2019 (18:04 IST)
ಕಡಲ ತೀರದಲ್ಲಿ ತ್ರಿದೇವಿ ಪ್ರೇಮ್ ಗೆ ಬರಬಾರದ ಸಂಕಷ್ಟ ಬಂದಿದೆ.
ಮಂಗಳೂರಿನ ಕಡಲತೀರದಲ್ಲಿ ಡ್ರಡ್ಜರ್ ಮುಳುಗಡೆಯಾಗಿರೋದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಡ್ರಡ್ಜರ್ ಗೆ ನೀರು ಒಳನುಗ್ಗಿತ್ತು. ತ್ರಿದೇವಿ ಪ್ರೇಮ್ ಎಂಬ ಹೆಸರಿನ ಡ್ರಡ್ಜರ್ ನಲ್ಲಿ ನೀರು ತುಂಬಿಕೊಂಡ ಪರಿಣಾಮ ಅದರಲ್ಲಿದ್ದ ಜನರು ತೊಂದರೆಗೆ ಸಿಲುಕಿದ್ದರು.
ಡ್ರಡ್ಜರ್ ನೊಳಗೆ ಇದ್ದ 13 ಮಂದಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದರು. ಅದಾದ ಒಂದು ದಿನದ ಬಳಿಕ ಡ್ರಡ್ಜರ್ ಮುಳುಗಡೆಯಾಗಿದೆ.