Publish Date: Sat, 18 May 2019 (12:30 IST)
Updated Date: Sat, 18 May 2019 (12:32 IST)
ಪೆಟ್ರೋಲ್ ಬಂಕ್ ವೊಂದರಲ್ಲಿ ಭಾರೀ ಮಳೆಯಿಂದಾಗಿ ಮರವೊಂದು ಉರುಳಿ ಬಿದ್ದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆಯಲ್ಲಿ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದೆ.
ಭಾರೀ ಮಳೆ ಸುರಿದ ಪರಿಣಾಮವಾಗಿ ಹಲವೆಡೆ ಧರೆಗುರುಳಿವೆ ಬೃಹತ್ ಗಾತ್ರದ ಮರಗಳು.
ಗುಡಿಬಂಡೆ ಪಟ್ಟಣದ HP ಪೆಟ್ರೋಲ್ ಬಂಕ್ ಬಳಿ ಮರಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ತಪ್ಪಿದೆ ಭಾರಿ ಅನಾಹುತ.
ಮಳೆಯಿಂದಾಗಿ ರೈತರ ಮೊಗದಲ್ಲಿ ಮೂಡಿದ ಮಂದಹಾಸ ಮೂಡಿದಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ವರುಣನ ಅಬ್ಬರ ಜೋರಾಗಿತ್ತು.