Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯ ಹೆದ್ದಾರಿ 61 ರಲ್ಲಿ ಸಂಚಾರ ಬಂದ್ ಆಗಿದೆ. ವಿಜಯಪುರ ತಾಳಿಕೋಟೆ ಹಾಗೂ ಇತರ ಭಾಗಗಳ ಸಂಪರ್ಕ ಕಡಿತವಾಗಿದ್ದು, 50 ಕ್ಕೂ ಆಧಿಕ ಕಿಲೋ ಮೀಟರ್ ಸುತ್ತು ಹಾಕೋ ಅನಿವಾರ್ಯತೆ ಎದುರಾಗಿದೆ. ಹೊಸ ಸೇತುವೆ ಬಿರುಕು ಬಿಟ್ಟು ವಾಲಿದ ಕಾರಣ ಅದರ ಮೇಲೆ ಸಂಚಾರ ನಿಷೇಧ ಮಾಡಲಾಗಿದೆ. ಆದರೆ ಕೆಲವರು ಅಪಾಯವನ್ನೂ ಲೆಕ್ಕಿಸದೇ ಶಿಥಿಲವಾದ ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಡೋಣಿ ನದಿ ಪ್ರವಾಹದಿಂದಾಗಿ ತಾಳಿಕೋಟೆ ಪಟ್ಟಣದ ಹೊರ ಭಾಗದ ಡೋಣಿ ನದಿ ತಟದಲ್ಲಿರೋ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದ್ದು, ದೇವರಿಗೂ ಜಲದಿಗ್ಭಂಧನ ಎನ್ನುವಂತಾಗಿದೆ. ದೇವಸ್ಥಾನದ ಅರ್ಧ ಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದ್ದು, ಆಂಜನೇಯ ದೇವರ ಮೂರ್ತಿಯ ಭಾಗ ನೀರಲ್ಲಿ ಮುಳುಗಿದೆ.