ಮಡಿಕೇರಿಯಲ್ಲಿ ಸ್ವಾತಂತ್ರ್ಯ ದಿನೋತ್ಸವದಲ್ಲಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಜೊತೆ ಆಕ್ಷೇಪಾರ್ಹ ವರ್ತನೆ ತೋರಿದ್ದ ಟಿ.ಪಿ. ರಮೇಶ್, ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವ ಟಿ.ಪಿ. ರಮೇಶ್. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್`ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 15ರಂದು ಮಡಿಕೇರಿಯ ಕೋಟೆ ಆವರಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನೋತ್ಸವದ ಕಾರ್ಯಕ್ರಮದಲ್ಲಿ ಟಿ.ಪಿ. ರಮೇಶ್, ವೀಣಾ ಅಚ್ಚಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವೀಣಾ ಅಚ್ಚಯ್ಯ ಅವರ ಪಕ್ಕದಲ್ಲೇ ಕುಳಿತಿದ್ಧ ಟಿ.ಪಿ. ರಮೇಶ್ ಅವರ ಕೈಮುಟ್ಟುವ ಮೂಲಕ ಆಕ್ಷೇಪಾರ್ಹ ವರ್ತನೆ ತೋರಿದ್ದರು. ಟಿ. ಪಿ. ರಮೇಶ್ ವರ್ತನೆ ಬಗ್ಗೆ ಪಕ್ಷದ ಒಳಗೂ ಹೊರಗೂ ಆಕ್ಷೇಪ ಕೇಳಿಬಂದಿತ್ತು. ಸಾರ್ವಜನಿಕರ ವಲಯದಲ್ಲೂ ಆಕ್ಷೇಪ ಕೇಳಿಬಂದಿತ್ತು. ಟಿ.ಪಿ. ರಮೇಶ್ ರಾಜೀನಾಮೆ ಕೊಡದಿದ್ದರೆ ಹೋರಾಟ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ