ಬೆಂಗಳೂರು: ಕೊರೋನಾ ಎರಡನೇ ಅಲೆ ಕಡಿಮೆಯಾದ ಹಿನ್ನಲೆಯಲ್ಲಿ ಮುಂದಿನ ವಾರದಿಂದ ಪ್ರವಾಸಿ ತಾಣಗಳು ಓಪನ್ ಆಗಲಿದೆ.
ಕೊರೋನಾದಿಂದ ರಾಜ್ಯದ ಎಲ್ಲಾ ಪ್ರವಾಸೀ ತಾಣಗಳು ಬಂದ್ ಆಗಿದ್ದವು. ಈಗ ಎಲ್ಲಾ ತಾಣಗಳು ಓಪನ್ ಆಗಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗುವುದು.
ಸದ್ಯಕ್ಕೆ ಕೇಂದ್ರ ಪುರಾತತ್ವ ಇಲಾಖೆಯಡಿ ಬರುವ ತಾಣಗಳಷ್ಟೇ ಪ್ರವೇಶಕ್ಕೆ ಮುಕ್ತವಾಗಲಿದೆ. ಇದಾದ ಬಳಿಕ ರಾಜ್ಯದ ಎಲ್ಲಾ ಪ್ರವಾಸೀ ತಾಣಗಳು ತೆರೆಯಲಿವೆ. ಪ್ರವಾಸೋದ್ಯಮ ತೆರೆದರೆ ವ್ಯಾಪಾರ, ವ್ಯವಹಾರ ಚುರುಕಾಗಬಹುದು. ಇದರಿಂದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.