ಇಸ್ರೇಲ್, ಇರಾನ್ ನಡುವಿನ ಯುದ್ಧದಿಂದ ಕರ್ನಾಟಕದ ಮೇಲಾಗುವ ಪರಿಣಾಮಗಳೇನು: ಟಾಪ್ 4 ಅಂಶಗಳು ಇಲ್ಲಿವೆ

Krishnaveni K
ಮಂಗಳವಾರ, 3 ಮಾರ್ಚ್ 2026 (10:12 IST)
ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಕದನ ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಅಲ್ಲೋಕಲ್ಲೋಲವಾಗಿಸಿದೆ. ಈ ಉದ್ವಿಗ್ನತೆಯ ಪರಿಣಾಮ ಕರ್ನಾಟಕದ ಮೇಲೂ ತಟ್ಟಲಿದೆ. ಟಾಪ್ 4 ಅಂಶಗಳು ಇಲ್ಲಿವೆ.

ತೈಲ ಬೆಲೆ ಏರಿಕೆ
ತೈಲ ಬೆಲೆ ಏರಿಕೆ ಇಡೀ ದೇಶದಲ್ಲೇ ಪರಿಣಾಮ ಬೀರಲಿದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯದಲ್ಲಿ ಈಗಾಗಲೇ ಪೆಟ್ರೋಲ್ ದರ ಸರಾಸರಿ 102 ರೂ. ದಾಟಿದೆ. ಇದು ಇನ್ನಷ್ಟು ಹೆಚ್ಚಾಗಬಹುದು.

ಪ್ರಯಾಣಿಕರ ಸಂಕಷ್ಟ
ಕರ್ನಾಟಕದಿಂದ ಎಷ್ಟೋ ಜನ ವಿದ್ಯಾಭ್ಯಾಸ, ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳುವ ತಯಾರಿಯಲ್ಲಿರುತ್ತಾರೆ. ಇಂತಹವರ ಭವಿಷ್ಯ ಈಗ ಅಂತತ್ರ ಸ್ಥಿತಿಗೆ ತಲುಪಲಿದೆ. ಯುದ್ಧದ ವಾತಾವರಣದಿಂದಾಗಿ ಹಲವು ವಿಮಾನಗಳು ರದ್ದಾಗಿದ್ದು ಕೆಲಸ ಕಾರ್ಯಗಳು ಅರ್ಧಕ್ಕೇ ಸ್ಥಗಿತವಾಗಲಿದೆ.

ಐಟಿ ಉದ್ಯಮಕ್ಕೆ ಪೆಟ್ಟು
ಕರ್ನಾಟಕದ ರಾಜಧಾನಿ ಬೆಂಗಳೂರು ಐಟಿ-ಬಿಟಿ ನಗರ ಎಂದೇ ಹೆಸರುವಾಸಿ. ಇಲ್ಲಿನ ಎಷ್ಟೋ ಐಟಿ ಕಂಪನಿಗಳ ಮೂಲ ವಿದೇಶಗಳದ್ದು. ವಿದೇಶಿ ಮೂಲದ ಕಂಪನಿಗಳಿಗೆ ಆರ್ಥಿಕವಾಗಿ ಹೊಡೆತ ಬಿದ್ದರೆ ಅವುಗಳ ಪರಿಣಾಮ ಇಲ್ಲಿಯೂ ನೌಕರರ ಲೇ ಆಫ್, ವೇತನ ಕಡಿತ ಇತ್ಯಾದಿಗಳಿಗೆ ಕಾರಣವಾಗಬಹುದು.

ಸರಕು ಸಾಗಣೆಗೆ ಸಮಸ್ಯೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮುಂತಾದ ಕಡೆಯಿಂದ ಗಲ್ಫ್ ರಾಷ್ಟ್ರಗಳ ಜೊತೆ ನೇರವಾಗಿ ಸರಕು ಸಾಗಣೆ ಸಂಬಂಧವಿದೆ. ಇವುಗಳಲ್ಲಿ ವ್ಯತ್ಯಯ ಕಂಡುಬಂದು ಕೆಲವೊಂದು ಉದ್ಯಮಗಳಿಗೆ ಹೊಡೆತ ಬೀಳಲಿದೆ. ಕಾಮಗಾರಿಗಳು ಅರ್ಧಕ್ಕೇ ನಿಲ್ಲಬಹುದು. ಅಥವಾ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ತಮಿಳುನಾಡಿಗೆ ಕಾವೇರಿ ನೀರು: ಶುಕ್ರವಾರ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ

ಅಯ್ಯೋ ಹೀಗೂ ಆಗುತ್ತಾ.. ಹೋಟೆಲ್ ನಲ್ಲಿ ಮೊಟ್ಟೆ ತಿಂದ ವ್ಯಕ್ತಿಯ ಕತೆ ಏನಾಯ್ತು ನೋಡಿ Video

ಗೋಮೂತ್ರವೆಂದು ತಮಾಷೆ ಮಾಡಿದ್ದ ಪ್ರಿಯಾಂಕ ಗಾಂಧಿ: ನೀವೂ ಸ್ವಲ್ಪ ಬಳಸಿ ಶುದ್ಧರಾಗ್ತೀರಿ ಎಂದ ಅನುರಾಗ್ ಠಾಕೂರ್ Video

ಅಲ್ಲಾರೀ.. ಬಾಂಗ್ಲಾ ಅಕ್ರಮ ವಲಸಿಗನಿಗಾಗಿ ಭಾರತೀಯನನ್ನು ಬಂಧಿಸುತ್ತೀರಾ: ಗೃಹ ಇಲಾಖೆಗೆ ಪರೋಕ್ಷ ಚಾಟಿ ಬೀಸಿದ ನ್ಯಾ. ನಾಗಪ್ರಸನ್ನ

ಮುಂದಿನ ಸುದ್ದಿ
Show comments