Select Your Language

Notifications

webdunia
webdunia
webdunia
webdunia

ನಾಳೆ ರಾಜಧಾನಿ ಬೆಂಗಳೂರು ಸ್ತಬ್ಧ..!

ನಾಳೆ ರಾಜಧಾನಿ ಬೆಂಗಳೂರು ಸ್ತಬ್ಧ..!
bangalore , ಸೋಮವಾರ, 25 ಸೆಪ್ಟಂಬರ್ 2023 (17:03 IST)
ಕಾವೇರಿ ನದಿ ನೀರಿನ ಹೋರಾಟ ಮಂಡ್ಯ, ಮೈಸೂರು, ಬೆಂಗಳೂರು ನಂತರ ಇಡೀ ಕರ್ನಾಟಕದಾದ್ಯಂತ ವ್ಯಾಪಿಸುತ್ತಿದೆ. ನಾಳೆ ಬೆಂಗಳೂರು ಬಂದ್​​ಗೆ ಕರೆ ನೀಡಿಲಾಗಿದೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​​ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಹೀಗಾಗಿ ಅಖಂಡ ಕರ್ನಾಟ ಬಂದ್ ಇರಲಿದೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​​ಗೆ ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

ಮಂಗಳವಾರ ಹಾಗೂ ಶುಕ್ರವಾರ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದಕ್ಕೆ, ರಾಜ್ಯದ ಹಿತ ಕಾಪಾಡಕ್ಕೆ ನಾವೆಲ್ಲ ಸಹಕಾರ ಕೊಡ್ತೇವಿ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡಲ್ಲ. ಆದರೆ ಶಾಂತಿ ಕಾಪಾಡಬೇಕು, ಜನರಿಗೆ ತೊಂದರೆ ಆಗಬಾರದು. ಹೋರಾಟ ಮಾಡಬಹುದು ಪ್ರಜಾಪ್ರಭುತ್ವದ‌ ಹಕ್ಕದು. ನಾವು ಯಾರು ಅದನ್ನು ಅಡ್ಡಿ ಪಡಿಸಲ್ಲ, ನಿಮ್ಮ ಹಕ್ಕನ್ನು ನೀವು ಉಳಿಸಿಕೊಳ್ಳಿ. ಇನ್ನೂ ಸುಪ್ರೀಂ, ಹೈಕೋರ್ಟ್ ಜಜ್ಮೆಂಟ್ ಇದೆ ಎಂದು ತಿಳಿಸಿದ್ದಾರೆ.

ನೀರಿನ ವಿಚಾರದಲ್ಲಿ ಕರ್ನಾಟಕ ಬಂದ್ ಮಾಡಿದ್ದೇನೆ ಎಂದು ಮಾಜಿ ಸಂಸದ ಶಿವರಾಮೇ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಬಂದ್‌ಗೆ ಕರೆ ನೀಡಿದಲ್ಲ, ಕಾವೇರಿ ವಿಚಾರದಲ್ಲಿ ಬರಿ ಬೆಂಗಳೂರು ಬಂದ್ ಮಾಡಿದ್ರೆ ಸಾಲದು. ಇಡೀ ಕರ್ನಾಟಕ ಬಂದ್ ಆಗಬೇಕು. ನಾವು ಕನ್ನಡ ‌ಹೋರಾಟಗಾರರಿಗೆ ಸಾಥ್ ನೀಡಬೇಕಾ ಅಥವಾ ರಾಜಕೀಯ ಪಕ್ಷಕ್ಕೆ ಸಾಥ್ ನೀಡಬೇಕಾ..? ಮುಖ್ಯಮಂತ್ರಿ ಚಂದ್ರು ಅವರಿಗೆ ಬೆಂಬಲ ನೀಡಬೇಕಾ. ನಾವೆಲ್ಲಾ ಒಟ್ಟಾಗಿ ಸೇರಿ ಕರ್ನಾಟಕ ಬಂದ್ ಮಾಡೋಣ ಅಂದರೆ ಅವರು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಮಾಡಿದ್ರೆ ನಾನು ಸಿಎಂ ಆಗ್ತಿದ್ದೆ-ವಾಟಾಳ್‌ ನಾಗರಾಜ್‌