ಶೌಚಗೃಹ ನಿರ್ಮಾಣಕ್ಕಾಗಿ ಅಧಿಕಾರಿಗಳಿಂದಲೇ ವಿನೂತನವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಕೈಯಲ್ಲಿ ತಮಟೆ ಬಾರಿಸುತ್ತಾ ಅಧಿಕಾರಿಗಳು ಗಮನ ಸೆಳೆದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಈ ವಿನೂತನ ಪ್ರತಿಭಟನೆ ಜರುಗಿದ್ದು, ಸ್ವತಃ ಅಧಿಕಾರಿಗಳೇ ತಮಟೆ ಬಾರಿಸಿ ಗಮನ ಸೆಳೆಯುವ ಮೂಲಕ ಸಾರ್ವಜನಿಕರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಲಕ್ಷ್ಮೇಶ್ವರದ ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮತ್ತು ಅಧಿಕಾರಿಗಳಿಂದ ವಿನೂತನ ಜಾಗೃತಿ ನಡೆಯುತ್ತಿದೆ.
ತಮಟೆ ಭಾರಿಸುವ ಮೂಲಕ ಮನೆ ಮನೆಗೆ ತೆರಳಿ ಮನೆ ಮಾಲಿಕರಿಗೆ ಶೌಚಾಲಯ ಉಪಯೋಗಿಸುವಂತೆ ತಿಳುವಳಿಕೆ ನೀಡುವ ಮೂಲಕ ಬಯಲು ಶೌಚ ಮುಕ್ತ ಮಾಡುವಂತೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಲಕ್ಷ್ಮೇಶ್ವರದ ವಿವಿಧ ವಾರ್ಡ್ ಗಳಲ್ಲಿ ಈ ವಿನೂತನ ಜಾಗೃತಿಯನ್ನು ಅಧಿಕಾರಿಗಳು ಬೆಳಿಗ್ಗೆಯಿಂದಲೇ ಶುರುಮಾಡಿದ್ದು ಅಧಿಕಾರಿಗಳ ಈ ಜಾಗೃತಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.