Publish Date: Mon, 10 Jul 2023 (10:45 IST)
Updated Date: Mon, 10 Jul 2023 (11:13 IST)
ಧಾರವಾಡ : ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಕೊಲೆ ಖಂಡಿಸಿ ಸೋಮವಾರ ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ.
ಚಿಕ್ಕೋಡಿ ಪಟ್ಟಣದ ಆರ್ಡಿ ಹೈಸ್ಕೂಲ್ ಹತ್ತಿರವಿರುವ ಮೈದಾನದಲ್ಲಿ ಸೇರುವ ಜೈನಸಮುದಾಯದ ಜನರು ಹಾಗೂ ಸ್ವಾಮೀಜಿಗಳು ಮೌನ ಪ್ರತಿಭಟನೆ ಮಾಡಿ, ಬಳಿಕ ಮೆರವಣಿಗೆ ಮಾಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಪ್ರಕರಣದ ತನಿಖೆ ಮಾಡಿ ಹಂತಕರಿಗೆ ಶಿಕ್ಷೆ ನೀಡುವಂತೆ ಮನವಿ ಮಾಡಲಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಖಂಡಿಸಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಲಿಲ್ಲವೆಂದು ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ವರೂರಿನ ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಗೃಹ ಸಚಿವರ ದೂರವಾಣಿ ಕರೆಮಾಡಿ ಬೇಡಿಕೆ ಈಡೇರಿಕೆ ಭರವಸೆ ನೀಡಿದ ಬಳಿಕ ಗುಣಧರನಂದಿ ಸ್ವಾಮೀಜಿ ಉಪವಾಸ ಕೈಬಿಟ್ಟಿದ್ದಾರೆ.