Select Your Language

Notifications

webdunia
webdunia
webdunia
webdunia

ರುಂಡದೊಂದಿಗೆ ಕೊಲೆಗಡುಕರು ಪರಾರಿ!

ರುಂಡ
ಕೊಲೆ ಮಾಡಿ ವ್ಯಕ್ತಿಯ ರುಂಡದೊಂದಿಗೆ ಕೊಲೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ.

ಕಲಬುರಗಿ ತಾಲೂಕಿನ ಆಲಗೂಡ ಗ್ರಾಮದ ಬಳಿ ಭೀಭತ್ಸ ಘಟನೆ ನಡೆದಿದೆ. ಗ್ರಾಮದ ಸಿದ್ದೋಜಿ ಭೋಸಲೆಯನ್ನು ಕೊಲೆಮಾಡಿರುವ ಕೊಲೆಗಡುಕರು ರುಂಡದೊಂದಿಗೆ ಪರಾರಿಯಾಗಿದ್ದಾರೆ.

ಔರಾದ್-ಆಲಗೂಡು ರಸ್ತೆ ಮಾರ್ಗದಲ್ಲಿ ಈ ಕೊಲೆ ನಡೆದಿದೆ. ಕಲಬುರಗಿಯಲ್ಲಿರುವ ಕೆಎಂಎಫ್ ನಲ್ಲಿ ಚಾಲಕನಾಗಿ ಕೊಲೆಯಾಗಿರುವ ಸಿದ್ದೋಜಿ ಕೆಲಸ ಮಾಡುತ್ತಿದ್ದನು.
ಹಣಕಾಸಿನ ವಿಷಯಕ್ಕೆ ಈ ಕೊಲೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಕೊಲೆ ಮಾಡಿ ರುಂಡ ಹೊತ್ತೊಯ್ದಿರುವ ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುನೀಲ್ ಗೌಡ ಪಾಟೀಲ್ ಗೆಲುವಿಗೆ ಸಂತಸ