Publish Date: Mon, 03 Oct 2022 (20:50 IST)
Updated Date: Mon, 03 Oct 2022 (20:55 IST)
ನವರಾತ್ರಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಹಿಂದೂಗಳು ಸೇರಿ ಗರ್ಬಾ ನೃತ್ಯ ಮಾಡ್ತಾರೆ. ಆದರೆ ಗರ್ಬಾ ನೃತ್ಯ ಮಾಡ್ತಿದ್ದ ಸ್ಥಳಕ್ಕೆ ಮೂವರು ಯುವಕರು ನುಗ್ಗಿದ್ದಾರೆ ಎಂದು ಆರೋಪಿಸಿ ಮೂರು ಜನ ಯುವಕರಿಗೆ ಧರ್ಮದೇಟು ಹಾಕಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕೆಲವು ಯುವಕರು ಗರ್ಬಾ ಪಂಗಡಕ್ಕೆ ಪ್ರವೇಶಿಸಿದ್ದಾರೆ. ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ ಎಂದು ಉಜ್ಜಯಿನಿ CSP ವಿನೋದ್ ಮೀನಾ ಮಾಹಿತಿ ನೀಡಿದ್ದಾರೆ. ನೃತ್ಯದ ಗುಂಪಿಗೆ ನುಗ್ಗಿದ ಯುವಕರ ಮೇಲೆ ಅನುಮಾನ ಬಂದ್ರೆ ಅವರನ್ನು ತಕ್ಷಣ ಪೊಲೀಸರಿಗೆ ಒಪ್ಪಿಸುವುದನ್ನು ಬಿಟ್ಟು ಸುಖಾಸುಮ್ಮನೆ ಗೂಸಾ ನೀಡಿದ್ದು ಮಾತ್ರ ವಿಪರ್ಯಾಸ