Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆ ಆರ್ ಎಸ್ ಬಗೆಗಿನ ನಿಗೂಢ ಸತ್ಯ ಇದೇ!

ಕೆ ಆರ್ ಎಸ್ ಬಗೆಗಿನ ನಿಗೂಢ ಸತ್ಯ ಇದೇ!
ಮೈಸೂರು , ಗುರುವಾರ, 6 ಜೂನ್ 2019 (18:41 IST)
ಕೆ ಆರ್ ಎಸ್ ಅರ್ಥಾತ್ ಕನ್ನಂಬಾಡಿ ಕಟ್ಟೆ ಶುರುವಾಗಿದ್ದರ ಬಗ್ಗೆ ಹಲವರು ತಮ್ಮದೇ ಶೈಲಿನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಡ್ಯಾಂ ಕುರಿತ ನಿಗೂಢ ಸ್ಟೋರಿ ಇಲ್ಲಿದೆ.

KRS (ಕನ್ನಂಬಾಡಿ ಕಟ್ಟೆ) ಕಟ್ಟುವ ಕೆಲಸ ಶುರುವಾದದ್ದು 1910 ರಲ್ಲಿ‌. ಮುಕ್ತಾಯಗೊಂಡದ್ದು 1932 ರಲ್ಲಿ‌. ವಿಶ್ವೇಶ್ವರಯ್ಯನವರು ಮೈಸೂರಿಗೆ ಬಂದದ್ದು 1912 ರಲ್ಲಿ ಮತ್ತು  1918 ರಲ್ಲಿಯೇ ನಾಲ್ವಡಿಯವರು SC, ST, OBC RM ಗಳಿಗೆ 75% ಪ್ರಾತಿನಿಧ್ಯ (ಮೀಸಲಾತಿ) ನೀಡಿದ್ದನ್ನು ವಿರೋಧಿಸಿ ರಾಜೀನಾಮೆ ನೀಡಿ ಹೋದರು. KRS ಆರಂಭವಾದಾಗ ಇದ್ದದ್ದು ಟಿ.ಆನಂದರಾವ್.

ಮುಕ್ತಾಯ ಹಂತದಲ್ಲಿ ದಿವಾನರಾಗಿದ್ದು ಸರ್ ಮಿರ್ಝಾ ಇಸ್ಮಾಯಿಲ್. ಈ ಮಧ್ಯದಲ್ಲಿ ಹೀಗೆ ಬಂದು ಹಾಗೆ ಹೋದವರು ಸನ್ಮಾನ್ಯ ವಿಶ್ವೇಶ್ವರಯ್ಯನವರು..! KRS ಯೋಜನೆ ರೂಪುರೇಷೆ  ಸಿದ್ಧವಾಗಿದ್ದದ್ದು ಟಿಪ್ಪುಸುಲ್ತಾನ್ ಕಾಲದಲ್ಲಿ.

ಸಿದ್ಧ ಮಾಡಿದ್ದು ಲಾರ್ಡ್ ಮೆಕ್ ಹೆಚಿನ್ ಎಂಬ ಫ್ರೆಂಚ್ ಇಂಜಿನಿಯರ್. ಅರಮನೆಯ ಹಾಗೂ ತನ್ನ ಮನೆಯವರ ಮೈಮೇಲಿನ ಒಡವೆ ಸುಮಾರು ಎರಡು ಕ್ವಿಂಟಲ್ ಚಿನ್ನವನ್ನು ಮುಂಬೈನಲ್ಲಿ ಮಾರಿ ಖುದ್ದಾಗಿ ನಿಂತು ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿಕೊಡು KRS ಕಟ್ಟಿಸಿದ್ದು ರೈತಬಂಧು ನಾಲ್ವಡಿ ಕೃಷ್ಣರಾಜ ಒಡೆಯರ್. ಇದು ಇತಿಹಾಸದ ನಿಜ ಪುಟ.



Share this Story:

Follow Webdunia kannada

ಮುಂದಿನ ಸುದ್ದಿ

ದಾನಿಗಳು ನೀಡಿದ್ರು ಬರೋಬ್ಬರಿ 1.5 ಕೋಟಿ ಏಕೆ?