ಬೆಂಗಳೂರು : ಬೆಂಗಳೂರಿನ ಯಲಹಂಕದ ಜಿಕೆವಿಕೆಯ107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ.
ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಲೋಹಗಳ ಮರುಬಳಕೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ 2202ರ ವೇಳೆಗೆ ಕಚ್ಚಾತೈಲ ಆಮದು ಕಡಿಮೆಯಾದ್ರೆ ಒಳಿತು. ಶೇ10ರಷ್ಟು ಕಡಮೆಯಾದರೂ ಹೆಚ್ಚು ಅನುಕೂಲವಾಗುತ್ತೆ. ಹೀಗಾಗಿ ಜೈವಿಕ ಇಂಧನಕ್ಕೆ ಹೆಚ್ಚು ಆದ್ಯತೆ ಕೊಡಬೇಕಿದೆ. ಕೃಷಿ ವಿಜ್ಞಾನದಲ್ಲಿ ಹೊಸದೊಂದು ಕ್ರಾಂತಿ ಆಗಲೇಬೇಕಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡಬೇಕು. ಮಾಲಿನ್ಯ ಕಡಿಮೆ ಮಾಡಿ ಹೆಚ್ಚಿನ ಫಸಲು ಬೆಳೆಯಲು ಆದ್ಯತೆ ನೀಡಬೇಕೆ ಎಂದು ತಿಳಿಸಿದ್ದಾರೆ.