ಹುಬ್ಬಳ್ಳಿ : ಮಧ್ಯಂತರ ಚುನಾವಣೆ ಮಾಡುವುದು ಸೂಕ್ತ ಎಂದಿದ್ದ ಬಸವರಾಜ್ ಹೊರಟ್ಟಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಬರುವ ಪ್ರಶ್ನಯೇ ಇಲ್ಲ. ಕೆಲವರಿಗೆ ದಿವ್ಯ ಜ್ಞಾನ ಇರುತ್ತೆ, ಆ ಜ್ಞಾನ ನಮಗಿಲ್ಲ ಎಂದು ವ್ಯಂಗ್ಯವಾಡಿದರು. ವೋಟ್ ಪ್ರಧಾನಿ ಮೋದಿಗೆ ಆದ್ರೆ ಕೆಲಸಕ್ಕೆ ನಾವು ಬೇಕಾ ಎಂದ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ನನಗೆ ಗೊತಿಲ್ಲ. ಗೊತಿಲ್ಲದೇ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಅವರೇ ಅದಕ್ಕೆ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ನಾವು ಬುಧವಾರ ಬೂತ್ ಲೇವಲ್ ಮೀಟಿಂಗ್ ಮಾಡಿದ್ದೇವೆ. ನಿನ್ನೆ ನೆಡೆದ ಮೀಟಿಂಗ್ ನಲ್ಲಿ ಕೆಲವರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸೋಲಿನ ಬಗ್ಗೆ ಪರಾಮರ್ಶೆ ಮಾಡಲಾಗಿದೆ. ಮೈತ್ರಿ ಒಂದೇ ಕಾಂಗ್ರೆಸ್ ಸೋಲಿಗೆ ಕಾರಣ ಅಲ್ಲ. ಸೋಲಿಗೆ ಕಾರಣವಾದ ಹಲವು ವಿಷಯದಲ್ಲಿ ಮೈತ್ರಿಯೂ ಒಂದು ಕಾರಣ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.