ಬೀದರ್ : ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡುವ ಹಿನ್ನಲೆಯಲ್ಲಿ ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ ಅನುದಾನ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಿಎಂ ಪತ್ರ ಬರೆದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ ಸರ್ಕಾರ 600 ಕೋಟಿ ರೂ. ಘೋಷಣೆ ಮಾಡಿದ್ರು ಬಿಡುಗಡೆ ಆಗಿಲ್ಲ. ಸಿಎಂ ತಕ್ಷಣವೇ 100 ಕೋಟಿ ಅನುದಾನ ಬಿಡಿಗಡೆ ಮಾಡಬೇಕು. ಕೊಟ್ಟ ಮಾತಿನಂತೆ ಕಾರಂಜಾ ಸಂತ್ರಸ್ರರಿಗೆ ಪರಿಹಾರ ಘೋಷಿಸಬೇಕು. ಬೀದರ್ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ರಾಯಚೂರಿನ ಕರೇಗುಡ್ಡದಲ್ಲಿ 2ನೇ ಗ್ರಾಮವಾಸ್ತವ್ಯ ಮುಗಿಸಿ ಇಂದು ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ 3ನೇ ಗ್ರಾಮವಾಸ್ತವ್ಯ ಮಾಡಲಿದ್ದಾರೆ.