ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ನೀಡಲು ನಯಾಪೈಸೆ ಹಣವಿಲ್ಲ. ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಲು ಹಣವಿಲ್ಲ. ಆದರೆ ಭ್ರಷ್ಟಾಚಾರದ ಪಿತಾಮಹನ ಕಛೇರಿ ಕೊಠಡಿ ನವೀಕರಣ ಮಾಡಲು, ಐಶಾರಾಮಿ ವಸ್ತುಗಳ ಖರೀದಿಸಿ ಶೋಕಿ ಮಾಡಲು ಕೋಟಿ ಕೋಟಿ ಹಣವಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದೆ.
ಭ್ರಷ್ಟ ಸಿದ್ದರಾಮಯ್ಯನವರ ಅರಾಜಕ ಆಡಳಿತದಲ್ಲಿ,
ರಾಜ್ಯದ ಅಭಿವೃದ್ಧಿಗೆ ನೀಡಲು ನಯಾಪೈಸೆ ಹಣವಿಲ್ಲ.
ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಲು ಹಣವಿಲ್ಲ.
ರೈತರ ಹಾಲಿಗೆ ಪ್ರೋತ್ಸಾಹಧನ ನೀಡಲು ಹಣವಿಲ್ಲ.
ನರೇಗಾ ಯೋಜನೆಯಡಿ ದುಡಿಯುವವರಿಗೆ ನೀಡಲು ದುಡ್ಡಿಲ್ಲ.
ಸಾರಿಗೆ ಸಂಸ್ಥೆಯ ಬಸ್ಗಳ ನಿರ್ವಹಣೆ, ನೌಕರರ ಸಂಬಳಕ್ಕೆ ಹಣವಿಲ್ಲ.
ಪಡಿತರ ಅಕ್ಕಿ ಬದಲು ಹಣ ನೀಡಲು ಬಿಡಿಗಾಸಿಲ್ಲ.
ಆದರೆ, ಭ್ರಷ್ಟಾಚಾರದ ಪಿತಾಮಹನ ಕಛೇರಿ ಕೊಠಡಿ ನವೀಕರಣ ಮಾಡಲು, ಐಶಾರಾಮಿ ವಸ್ತುಗಳ ಖರೀದಿಸಿ ಶೋಕಿ ಮಾಡಲು ಕೋಟಿ ಕೋಟಿ ಹಣವಿದೆ. ಸಿದ್ದರಾಮಯ್ಯನವರೇ, ರಾಜ್ಯದ ಜನ ನಿಮ್ಮ ಭ್ರಷ್ಟ, ಹಗರಣಗಳ ಆಡಳಿತಕ್ಕೆ ಬೇಸತ್ತಿದ್ದಾರೆ. ಜನರೇ ದಂಗೆಯೆದ್ದು ನಿಮ್ಮನ್ನು ವಿಧಾನಸೌಧದಿಂದ ಆಚೆ ಹಾಕುವ ಮೊದಲು ರಾಜೀನಾಮೆ ನೀಡಿ, ಮನೆಗೆ ಹೊರಡಿ.