Publish Date: Sun, 03 Sep 2017 (12:39 IST)
Updated Date: Sun, 03 Sep 2017 (12:41 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್ ಸ್ಪಷ್ಟನೆ ನೀಡಿದ ಅವರು,ನನಗೆ ಜ್ವರ ಇದ್ದ ಕಾರಣ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದು ಬಿಟ್ಟು ಬೇರೆ ಯಾವುದೇ ಕಾರಣಗಳಿಲ್ಲ ಎಂದರು.
ಕಳೆದ ಆರುವರೆ ವರ್ಷಗಳಿಂದ ನಾವಿಬ್ಬರು ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರೊಂದಿಗೆ ಗೃಹ ಸಚಿವರಾಗಿ ಕೆಲಸಮಾಡಿದ್ದ ಆ ಸಂದರ್ಭದಲ್ಲಿಯೂ ನಮ್ಮ ನಡುವೆ ಭಿನ್ನಾಭಿಪ್ರಾಯವಿರಲಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಮತ್ತು ನನ್ನ ಮಧ್ಯೆ ಕೋಲ್ಡ್ ವಾರ್ ಅಥವಾ ಕೋಲ್ಡ್- ಹಾಟ್ ಯಾವ ಮನಸ್ತಾಪವೂ ಇಲ್ಲ. ಇದೆಲ್ಲಾ ವಿಪಕ್ಷಗಳು ಹರಡಿಸುತ್ತಿರುವ ಉಹಾಪೋಹ ವರದಿಗಳು ಎಂದು ತಿರುಗೇಟು ನೀಡಿದ್ದಾರೆ.
ಸಚಿವರ ಪಟ್ಟಿಗೆ ನಾನು ಮತ್ತು ಸಿಎಂ ಬೇರೆ ಬೇರೆ ಹೆಸರು ಸೂಚಿಸಿರಬಹಹುದು ಆದರೆ, ಕೊನೆಗೆ ನಾವಿಬ್ಬರು ಒಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ. ಭಿನ್ನಾಭಿಪ್ರಾಯದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.