Publish Date: Thu, 30 Mar 2023 (06:19 IST)
Updated Date: Thu, 30 Mar 2023 (00:20 IST)
ಮೈಸೂರು : ಈಶ್ವರಪ್ಪ ಅಂತಾ ಒಬ್ಬ ದಡ್ಡ ಇದ್ದಾನೆ. ಅವನಿಗೆ ದಿನವೂ ಹಣ ಎಣಿಸೋದೆ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವರುಣಾ ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಮಾತನಾಡಿದ ಅವರು, ತನ್ನ ಪಕ್ಷದ ಕಾರ್ಯಕರ್ತನಿಂದಲೇ ಈಶ್ವರಪ್ಪ ಕಮಿಷನ್ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೇ ಬೊಮ್ಮಾಯಿ ಮಾತು ಎತ್ತಿದ್ದರೆ ಧರ್ಮರಾಯನ ಥರ ಮಾತಾಡುತ್ತಾರೆ.
40% ಸರ್ಕಾರ ಇದು. ಬೆಂಗಳೂರಿನಲ್ಲಿ ಇದು 50% ಸರ್ಕಾರ. ಕಮಿಷನ್ಗೆ ದಾಖಲೆ ಕೇಳುತ್ತಾರೆ. ಮಾಡಾಳ್ ವಿರೂಪಾಕ್ಷಪ್ಪ ಜೈಲಿಗೆ ಹೋಗಿದ್ದು ಹಾಗೆ? ಇಂಥವರಿಗೆ ಮತ ಹಾಕಬಾರದು ಎಂದು ಕಿಡಿಕಾರಿದರು.