Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪೊಲೀಸರ ಕಾರಿಗೇ ಕನ್ನ ಹಾಕಿದ ಖದೀಮರು ಲ್ಯಾಪ್ ಟಾಪ್, ನಗದು ಸೇರಿದಂತೆ ಬೆಲೆ ಬಾಳುವ ವಸ್ತು ದೋಚಿ ಪರಾರಿಯಾಗಿದ್ದಾರೆ.
ಲ್ಯಾಪ್ ಟಾಪ್, 3 ಪೆನ್ ಡ್ರೈವ್ ಜೊತೆಗೆ 50 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ರೇಸ್ ಕೋರ್ಸ್ ರಸ್ತೆ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಖದೀಮರು ದೋಚಿದ್ದಾರೆ.
ಇನ್ಸ್ ಪೆಕ್ಟರ್ ಅರುಣ್ ಸಾಳುಂಕೆ ಅವರ ಕಾರಿನಲ್ಲಿ ದರೋಡೆ ನಡೆದಿದೆ. ಇದೀಗ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಖದೀಮರಿಗಾಗಿ ಹುಡುಕಾಟ ನಡೆಸಿದ್ದಾರೆ.