Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಳ್ಳರಾದರೇನು? ಕೆಲವರಲ್ಲಿ ದೈವ ಭಕ್ತಿಯೂ ಇರುತ್ತದೆ. ಇದೇ ರೀತಿ ನಗರದಲ್ಲಿ ಕಳ್ಳನೊಬ್ಬ ದೇವರ ಆಭರಣ ಕಳ್ಳಲು ಬಂದವನು ಸೈಲಂಟಾಗಿ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ.
ಕಳ್ಳನೊಬ್ಬ ತುಂಡು ಬಟ್ಟೆಯಲ್ಲಿ ತಾವರೆಕೆರೆಯ ಸುಬ್ರಮಣ್ಯ ದೇವಾಲಯದಲ್ಲಿ ಕಳ್ಳತನಕ್ಕೆ ಬಂದಿದ್ದ. ಬೀಗ ಒಡೆದು ಗರ್ಭಗುಡಿ ಪ್ರವೇಸಿಸಿದ ಕಳ್ಳ ಕೆಲವು ಕಾಲ ವಿಗ್ರಹದ ಮುಂದೆ ನಿಂತಿದ್ದಾನೆ.
ಬಳಿಕ ಆಭರಣ ಕಳ್ಳತನ ಮಾಡದೇ ಸೈಲಂಟಾಗಿ ಜಾಗ ಖಾಲಿ ಮಾಡಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳತನ ಮಾಡಲು ಬಂದವನು ಹಾಗೇ ಹೋಗಲು ಕಾರಣವಾಗಿದ್ದಾದರೂ ಏನು ಎಂಬುದು ಈಗ ಅಚ್ಚರಿಯಾಗಿ ಉಳಿದಿದೆ.