Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೈಟಿ ಹಾಕಿಕೊಂಡು ಬಂದು ಚಪ್ಪಲಿ ಕಳ್ಳುವ ಖದೀಮ!

crime

Krishnaveni K

ಬೆಂಗಳೂರು , ಬುಧವಾರ, 21 ಫೆಬ್ರವರಿ 2024 (14:37 IST)
ಬೆಂಗಳೂರು: ಜಗತ್ತಿನಲ್ಲಿ ಎಂತೆಂಥಾ ಖದೀಮರಿದ್ದಾರೆ ನೋಡಿ. ಇಲ್ಲೊಬ್ಬ ಕಳ್ಳ ರಾತ್ರಿ ವೇಳೆ ನೈಟಿ ಹಾಕಿಕೊಂಡು ಬಂದು ದುಬಾರಿ ಶೂ ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ!

ಅನಿಲ್ ಎಂಬವರು ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಈ ಕಳ್ಳನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರಂತೆ ನೈಟಿ ಹಾಕಿಕೊಂಡು ಬರುವ ಕಳ್ಳ ದುಬಾರಿ ಶೂ, ಚಪ್ಪಲಿಗಳನ್ನು ಕದ್ದು ಪರಾರಿಯಾಗುತ್ತಾನೆ. ಈತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಖದೀಮನ ಬಗ್ಗೆ ಎಚ್ಚರವಾಗಿರಿ ಎಂದು ಅನಿಲ್ ಟ್ವೀಟ್ ಮಾಡಿದ್ದಾರೆ.

ಗುರುತು ಸಿಗಬಾರದು ಎಂಬ ಕಾರಣಕ್ಕೆ ನೈಟಿ ಹಾಕಿಕೊಂಡು ಮಹಿಳೆಯರಂತೆ ವೇಷ ಹಾಕಿಕೊಂಡು ಬರುತ್ತಾನೆ. ಬಳಿಕ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳ ಕೌಂಪೌಂಡ್ ಹಾರಿ ಸದ್ದಿಲ್ಲದೇ ಒಳಗೆ ಪ್ರವೇಶಿಸುತ್ತಾನೆ. ಬಳಿಕ ಶೂ ಕದ್ದು ಪರಾರಿಯಾಗುತ್ತಾನೆ. ಇದನ್ನೇ ಆತ ವೃತ್ತಿ ಮಾಡಿಕೊಂಡಿದ್ದಾನೆ. ಹೀಗಾಗಿ ಇಂತಹ ಖದೀಮರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.

ಈ ಬಗ್ಗೆ ಬೆಂಗಳೂರಿಗರು ಎಚ್ಚರವಾಗಿರಬೇಕು. ಬೆಂಗಳೂರು ಪೊಲೀಸರು ಈ ಖತರ್ನಾಕ್ ಕಳ್ಳನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನಿಲ್ ಆ ಕಳ್ಳನ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.  ದುಬಾರಿ ಶೂಗಳನ್ನು ಮನೆ ಹೊರಗಿಟ್ಟರೆ ಕಳ್ಳತನವಾದರೂ ಅಚ್ಚರಿಯಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಹೆಚ್ಚಿದ ಸ್ನೇಕ್..!