Webdunia - Bharat's app for daily news and videos

Install App

ನಾನಾ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರು ಯಶೋಕಾಥೆ

Webdunia
ಮಂಗಳವಾರ, 8 ಮಾರ್ಚ್ 2022 (20:23 IST)
ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನಮಾನ ಇದೆ. ಹೆಣ್ಣು ಎಲ್ಲಾರಂಗದಲ್ಲೂ ತನ್ನ ಛಾಪನ್ನ ಮೂಡಿಸುತ್ತಿದ್ದಾಳೆ. ಆದ್ರೆ ಹೆಣ್ಣಿನ ಸಾಧನೆ ಮಾತ್ರ ಜಗತ್ತಿಗೆ ಕಾಣದಂತೆ ಎಲೆಮಾರಿಕಾಯಿಯಾಗಿ ಉಳಿದಿದೆ. ಆದ್ರೆ ಕೆಲವು ಮಹಿಳೆಯರು ಸಾಧನೆ ಮಾಡುವುದಕ್ಕೆ , ತನ್ನ ಕಾಲ ಮೇಲೆ ತಾನು ನಿಲ್ಲುವುದಕ್ಕೆ ಆಗುವುದಿಲ್ಲ.  ಅನೇಕ ಅಡಚಡೆಗಳು, ದೌರ್ಜನಗಳು ನಿತ್ಯ ನಡೆಯುತ್ತಿರುತ್ತೆ. ಆದ್ರೆ ಇದನ್ನೆಲ್ಲಾ ಮೆಟ್ಟಿನಿಂತು ಸಾಧನೆ ಮಾಡಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡ ಮಹಿಳೆಯ ಸಾಧನೆಯ ಅನಾವರಣ ಇವತ್ತಿನ ಮಹಿಳಾ ದಿನಾಚರಣೆಯ ವಿಶೇಷ
 
 
ಸಾಧನೆ ಎಂಬ ಈ  ಪದ ತುಂಬ ದೊಡ್ಡದ್ದು , ಆದ್ರೆ ಈ ಪದದಂತೆ ಸಾಧನೆ ಮಾಡುವುದು ಸುಲಭದ ಮಾತಲ್ಲ. ಆದ್ರೆ ಇಲ್ಲಿ  ಒಬ್ಬ ಮಹಿಳೆ ಅಪ್ಪ-ಅಮ್ಮ ಇಲ್ಲದೇ ಅನಾಥೆಯಾಗಿ ಬೆಳೆದಳು. ಯಾರೋದೋ ಆಶ್ರಯದಲ್ಲಿ  ಬೆಳೆದ ಶೈಲಾಜ 10 ನೇ ತರಗತಿವರೆಗೂ ಓದಿದ್ದಳು . ನಂತರ ಸಂಗೀತ, ನೃತ್ಯ ಕಲಿತ್ತಿದ್ದ ಈಕೆ ಚಿಕ್ಕ ವಯಸ್ಸಿನಲ್ಲಿಯೇ ಕಾರ್ಯಕ್ರಮಗಳನ್ನ ಕೊಡ್ತಾ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಳು. ಈಕೆ ಚಂದನ ಟಿವಿಯಲ್ಲಿಯೂ ವಿಶೇಷವಾದ ಕಾರ್ಯಕ್ರಮಗಳನ್ನ ಕೊಡುತ್ತಿದ್ದಳು. ತದನಂತರ ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಅನೇಕ ದೊಡ್ಡ ಗಾಯರಿಗೆ ಹಿನ್ನೆಲೆ ಧ್ವನಿಯನ್ನ ಕೂಡ ಕೊಡುತ್ತಿದ್ದಳು. ಹೀಗೆ ಸಾಧನೆ ಮಾಡಬೇಕಾದ್ರೆ ಒಬ್ಬ ವ್ಯಕ್ತಿಯೊಂದಿಗೆ ಮದುವೆಯಾಗುತ್ತೆ . ಮದುವೆಯಾದ ನಂತರ ಪತಿ ಸಾಧನೆಗೆ ಸಪೋರ್ಟ್ ಮಾಡದೇ ಸಾಧನೆಗೆ ಅಡ್ಡಗಾಲು ಹಾಕ್ತಾನೆ. ಮನೆಯಲ್ಲಿಯೇ ಈಕೆಯನ್ನ ಬಂಧಿಸಿಡುತ್ತಾನೆ. ಇಬ್ಬರು ಮಕ್ಕಳು ಆದ್ಮೇಲೂ ಸಾಧನೆ ಮಾಡಲು ಬಿಡಲ್ಲ . ಹೀಗೆ ಗಂಡ- ಹೆಂಡತಿ ನಡುವೆ ನಿತ್ಯ ಜಗಳವಾಗಿ ಅರ್ಧದಲ್ಲೇ ಈಕೆಯನ್ನ ಪತಿ ಬಿಟ್ಟು ಹೋಗ್ತಾನೆ. ಆಗ ಈಕೆಗೆ ದಿಕ್ಕು ತೋಚದಂತೆಯಾಗಿ ಬದುಕು ಕಟ್ಟಿಕೊಳ್ಳಲಾಗದೆ ಹರಸಾಹಸ ಪಡ್ತಾಳೆ, ರಾತ್ರಿ ಟೈಮ್ ನಲ್ಲಿ ಟೀ ಮಾರಿಕೊಂಡು ಜೀವನ ನಡೆಸುತ್ತಾಳೆ. .ಹೀಗೆ ಕಷ್ಟ ಪಟ್ಟು ಪಟ್ಟು  ತನ್ನದೇ ಆದ ಆಟೋವನ್ನ ತೆಗೆದುಕೊಂಡು ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ತಾಳೆ.ಆಟೋವನ್ನ ಓಡಿಸಿಕೊಂಡು ರಂಗಭೂಮಿಯಲ್ಲಿ ಹೆಸರು ಮಾಡ್ತಾ  ಬದುಕು ಸಾಗಿಸುತ್ತಿದ್ದಾಳೆ . ಇತ್ತಾ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಓದಿಸಿಕೊಂಡು ಹಗಲು ರಾತ್ರಿ ಎನ್ನದೇ ಕಷ್ಟಪಾಡುತ್ತಿದ್ದಾಳೆ .
 
ಇನ್ನು ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳಾ ದಿನಾಚರಣೆ ಯನ್ನ ಆಚರಿಸಲಾಗಿತ್ತು. ಪೊಲೀಸ್ ಠಾಣೆ ಗೆ ಬಲೂನ್ ಗಳಿಂದ ಆಲಂಕಾರ ಮಾಡಿ ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾವರಣೆಗೆ ಮತ್ತಷ್ಟು ಮೆರಗು ತರಲಾಗಿತ್ತು. ವಿಶೇಷವಾಗಿ ಮಹಿಳೆಯರು ಹಾಗೂ ಶಾಲಾ ಹೆಣ್ಣು ಮಕ್ಕಳನ್ನ ಠಾಣೆಗೆ ಕರೆದು ಕೇಕ್ ಕತ್ತರಿಸಿ ಸಂಭ್ರಮಿಸಲಾಗಿತ್ತು. ಮಹಿಳೆಯರು ಗೌರವಯುತವಾಗಿರಬೇಕು ಎಂಬ ಸಂದೇಶವನ್ನ ಠಾಣೆಯಲ್ಲಿ ಸಾರುತ್ತಾ ಮಹಿಳಾ ದಿನಾಚರಣೆಗೆ ಮತ್ತಷ್ಟು ಮೆರಗನ್ನು ತರಲಾಗಿತ್ತು. ಇನ್ನು ಇತ್ತಾ ಇಂದು ಮಹಿಳಾ ದಿನಾಚರಣೆ ಅಂಗವಾಗಿ ಠಾಣೆಯಲ್ಲಿ ಸಂಭ್ರಮ ಮನೆಮಾಡಿದ್ರೆ . ಇತ್ತಾ ಸಾಮಾನ್ಯ ಮಹಿಳೆಯರು ಮಹಿಳಾ ದಿನಾಚರಣೆ ಬಗ್ಗೆ ಗೊತ್ತಿಲ್ಲದೇ ತಮ್ಮದೇ ಆದ ರಂಗದಲ್ಲಿ ಅಂದ್ರೆ ಅಮ್ಮ ಆಗಿ,   ಗೃಹಿಣಿಯಾಗಿ, ಕೂಲಿ ಕೆಲಸ ಮಾಡುವವಳಾಗಿ , ಪೌರ ಕಾರ್ಮಿಕಳಾಗಿ , ವೈದ್ಯೆಯಾಗಿ ಹೀಗೆ ಹಲವು ರಂಗಗಳಲ್ಲಿ ಮಹಿಳೆ ಸಾಧನೆ ಮಾಡ್ತಾ ತನ್ನ ಕುಟುಂಬದವರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾಳೆ . ತನ್ನ ಜೀವನವನ್ನ ಸವಿಸುತ್ತಿದ್ದಾಳೆ.
 
ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಅಂತಾ ಮುನ್ನುಗುತ್ತಿದ್ದಾರೆ. ಇಲ್ಲೋಬ್ಬ ಮಹಿಳೆ ತನ್ನ ಗಂಡ ಹುಷಾರಿಲ್ಲದೇ ಹಾಸಿಗೆ ಹಿಡಿದಾಗ ದಾರಿ ಕಾಣದೇ ಆಟೋ ಓಡಿಸುವುದನ್ನ ಕಲಿತ್ತಾಳು . ಮನೆಯ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಆಟೋ ಓಡಿಸುತ್ತಾ ತನ್ನ ಗಂಡನಿಗೆ ನೆರವಾಗ್ತಾಳೆ. ಹೀಗೆ ಆಟೋ ಓಡಿಸುವುದನ್ನೇ ಈಗ ಬನ್ನೇರುಘಟ್ಟದ ಜಾನ್ಸಿ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾಳೆ. ಒಬ್ಬ ಮಹಿಳೆಯಾಗಿ ಆಟೋ ಓಡಿಸಿಕೊಂಡು ಬದುಕು ಕಟ್ಟಿಕೊಳ್ತಿದ್ದಾಳೆ. ಒಬ್ಬ ಮಹಿಳೆ ಆಟೋ ಓಡಿಸುತ್ತಾಳೆ  ಅಂದ್ರೆ  ಎಷ್ಟೋ ಜನರು ತುಚ್ಛವಾಗಿ ಕಾಣ್ತಾರೆ. ಅವಳ ಜೊತೆ ಕೆಲವರು ಅಸಭ್ಯವಾಗಿ ವರ್ತಿಸುವ ಪ್ರಸಂಗವು ಉಂಟು. ಆದ್ರೆ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ , ದೃತಿಗೆಡದೇ ಜಾನ್ಸಿ ಆಟೋ ಓಡಿಸುತ್ತಾ ಗಂಡ- ಮಕ್ಕಳಿಗೆ ಆಸರೆಯಾಗ್ತಿದ್ದಾಳೆ 
 
ಹೆಣ್ಣು ಅಂದರೆ ಎಷ್ಟೋ ಜನರು ಇವಳ ಕೈ ಯಲ್ಲಿ ಏನು ಆಗಲ್ಲ ಅಂತಾ ಮೂಗುಮುರಿತ್ತಾರೆ. ಆದ್ರೆ ಈಗ ಹೆಣ್ಣು ಎಲ್ಲಾ ರಂಗದಲ್ಲೂ ತನ್ನದೇ ಆದ ಛಾಪನ್ನ ಮೂಡಿಸುತ್ತಾ  ಕುಟುಂಬದ ಜವಬ್ದಾರಿಯ ಜೊತೆ ಸಾಧನೆಯನ್ನ ಕೂಡ ಮಾಡ್ತಾ ಮುನ್ನುಗುತ್ತಿದ್ದಾಳೆ.ಹೀಗೆ ನಿಮ್ಮ ಧೈರ್ಯ, ಛಲ ಮುಂದುವರೆಯಲಿ ಎಂಬುದೇ ನಮ್ಮ ಆಶಯ . ಎಲ್ಲ ಮಹಿಳೆಯರಿಗೂ ಆಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶುಯಗಳು .

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments