ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ. ಬದಲಾಗಿ ಅದು ಬದುಕಿನ ವ್ಯವಸ್ಥೆಯಾಗಿದೆ ಎಂದ ಕೇಂದ್ರ ಸಚಿವ ಹೇಳಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಈ ಹೇಳಿಕೆ ನೀಡಿದ್ದಾರೆ. ಸಲಿಂಗಕಾಮದ ಬಗ್ಗೆ ಸುಪ್ರಿಂಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದರು.
ಶಿರಸಿಯಲ್ಲಿ ಹಿಂದೂ ಫೈರ್ ಬ್ರಾಂಡ್ ಹೆಗಡೆಯಿಂದ ಐಪಿಸಿ ಸೆಕ್ಷನ 377 ಸಮ್ಮತಿಯ ಸಲಿಂಗಕಾಮದ ಬಗ್ಗೆ ಸಹಮತದ ಮಾತು ವ್ಯಕ್ತವಾಗಿದೆ. ಮಾನವೀಯ ನೆಲೆಗಟ್ಟಿನಡಿ ತೀರ್ಪನ್ನು ಪರಾಮರ್ಶಿಸಬೇಕು. ಸಲಿಂಗಿಗಳು ಕೂಡ ನಮ್ಮನಿಮ್ಮಂತೆ ಮನುಷ್ಯರಾಗಿದ್ದಾರೆ. ಸಲಿಂಗಕಾಮವನ್ನು ಜಗತ್ತಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಎಲ್ಲರಂತೆ ಅವರಿಗೂ ಅವಕಾಶ ನೀಡಬೇಕು. ಸಮುದಾಯದ ಮಧ್ಯೆ ಬದುಕುತ್ತಿರುವ ಸಲಿಂಗಗಳ ಕಡೆಗೆ ಪ್ರೀತಿ, ಮಮಕಾರ ಬೇಕು.
ಅವರ ಬದುಕಿಗೂ ಸ್ವಾತಂತ್ರ್ಯ ಇದೆ. ಅದನ್ನ ಗೌರವಿಸುವ ಕೆಲಸ ಆಗಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.