Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ , ಗುರುವಾರ, 6 ಸೆಪ್ಟಂಬರ್ 2018 (12:23 IST)
ನವದೆಹಲಿ: ಸಲಿಂಗ ಕಾಮ ಅಪರಾಧವೇ ನ್ಯಾಯ ಸಮ್ಮತವೇ ಎಂಬ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

 
ಸಲಿಂಗಕಾಮ ಇನ್ನು ಮುಂದೆ ಅಪರಾಧವೆಂದು ಪರಿಗಣಿಸುವಂತಿಲ್ಲ. ಸಲಿಂಗಿಗಳು ಸಮ್ಮತದ ಸೆಕ್ಸ್ ನಡೆಸುವುದಕ್ಕೆ ಯಾವುದೇ ಕಾನೂನು ತೊಡಕಿಲ್ಲ ಎಂದು ಸುಪ್ರೀಂಕೋರ್ಟ್ ನ ಐವರು ಸದಸ್ಯರ ಪೀಠ ಆದೇಶ ನೀಡಿದೆ.

ಹಿಂದಿನ ಬ್ರಿಟಿಷ್ ಸರ್ಕಾರದ ಕಾನೂನನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ಭಾರತೀಯ ದಂಡಸಂಹಿತೆ 377 ನೇ ವಿಧಿಯನ್ನು ರದ್ದುಗೊಳಿಸಿದೆ. ಸಲಿಂಗ ಕಾಮ ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆ 377 ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಜುಲೈ 17 ರಂದು ವಿಚಾರಣೆ ಅಂತ್ಯಗೊಳಿಸಿತ್ತು. ಇದೀಗ ಪ್ರಕರಣದ ತೀರ್ಪು ಘೋಷಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.    

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರವನ್ನು ಪ್ರಶ್ನಿಸಲು ರಾಹುಲ್ ಗಾಂಧಿಗೆ ಹಕ್ಕಿಲ್ಲ: ಅಮಿತ್ ಶಾ