ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಈ ಜಿಲ್ಲೆಗೆ ಬರುವವರಿಗೆ ಪಾಸ್ ಕಡ್ಡಾಯ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲದೇ ಹೆಚ್ಚಿನ ಪ್ರಕರಣಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ವಿಮ್ಸ ಆಸ್ಪತ್ರೆಗೆ ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.
ಇ-ಪಾಸ್ ಸೇವಾ ಸಿಂಧುವಿನಲ್ಲಿ ನೋಂದಣಿ ಮತ್ತು ಜಿಲ್ಲಾಡಳಿತ ನೀಡುವ ಪಾಸ್ ಗಳಿಲ್ಲದೇ ಬಳ್ಳಾರಿ ಜಿಲ್ಲೆಗೆ ಪ್ರವೇಶ ನೀಡುವುದಿಲ್ಲ. ಈ ಆದೇಶ ಸರಕು ಸಾಗಾಣೆ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಆಂಧ್ರಪ್ರದೇಶದಿಂದ ಬರುವ ಬಸ್ ಗಳಲ್ಲಿ ಸೇವಾ ಸಿಂಧು ನೋಂದಣಿ ಮಾಡಿರುವವರನ್ನು ಮಾತ್ರ ಕರೆತರಲು ಸೂಚಿಸಿದೆ ಎಂದಿದ್ದಾರೆ.