Publish Date: Sun, 05 Jul 2020 (18:24 IST)
Updated Date: Sun, 05 Jul 2020 (18:25 IST)
ಕೊರೊನಾ ವೈರಸ್ ನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದ ಯುವಕನೊಬ್ಬ ನಾಪತ್ತೆಯಾಗಿದ್ದು ಜನರಲ್ಲಿ ಗಾಬರಿ ಮೂಡಿಸಿದ್ದಾನೆ.
ಹಾವೇರಿಯ ರಟ್ಟಿಹಳ್ಳಿ ತಾಲೂಕಿನಲ್ಲಿ ಘಟನೆ ನಡೆದಿದ್ದು, ಕೊರೊನಾ ಪಾಸಿಟಿವ್ ವರದಿ ಬಂದಿದ್ದೇ ತಡ ಯುವಕ ಎಸ್ಕೇಪ್ ಆಗಿದ್ದಾನೆ.
ಯುವಕ ನಾಪತ್ತೆಯಾಗುವುದಕ್ಕೂ ಮೊದಲು ಮೊಬೈಲ್ ನಲ್ಲಿನ ಸಿಮ್ ಕಾರ್ಡ್ ಕಿತ್ತು ಹಾಳು ಮಾಡಿದ್ದಾನೆ.
ಯುವಕನ ವಿರುದ್ಧ ಕೇಸ್ ದಾಖಲಿಸಲು ತಾಲೂಕು ಆಡಳಿತ ಮುಂದಾಗಿದೆ.