Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ

ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ
bangalore , ಭಾನುವಾರ, 23 ಜುಲೈ 2023 (14:50 IST)
ನಮ್ಮ ದೇಶದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ದೊಡ್ಡದು ಅಂತ ಹೇಳಿದ್ರೆ ಅದು ರೈಲ್ವೆ ಇಲಾಖೆ. ದಿನನಿತ್ಯ ರೈಲುಗಳಲ್ಲಿ ಲಕ್ಷಾಂತರ ಜನ ದೇಶದ ನಾನಾ ಕಡೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ  ಓಡಾಡ್ತಾರೆ. ಅದರಲ್ಲಿ ಕೆಲ ಜನ ಬಡವರು ಕಡಿಮೆ ದರದಲ್ಲಿ ಪ್ರಯಾಣ ಮಾಡುವ ನೆಟ್ಟಿನಲ್ಲಿ ಜನರಲ್ ಭೋಗಿಗಳನ್ನು  ಬಳಸುತ್ತಾರೆ. ಒಂದು ಬಾರಿ ನೀವು ಜನರಲ್ ಭೋಗಿಗಳನ್ನು ಹತ್ತಿದ್ರೆ ವಾಪಸ್ ನೀವು ಇಳಿಯೋಕ್ಕು ಆಗಲ್ಲ ಅಷ್ಟು ರಶ್ ಇರುತ್ತವೆ. ಹೀಗಾಗಿ ಊಟ ನೀರು ಮಾರಾಟ ಮಾಡುವವರು ಜನರಲ್ ಭೋಗಿಗಳಲ್ಲಿ ಬರೋದಿಲ್ಲ,  ಒಂದು ವೇಳೆ ಬಂದರೂ ಕೂಡ ಹೆಚ್ಚಿನ ಹಣ ಕೊಟ್ಟು ಊಟ ಖರೀದಿ ಮಾಡಬೇಕಾಗುತ್ತೆ. ಹೀಗಾಗಿ ಜನರಲ್  ಭೋಗಿ  ಪ್ರಯಾಣಿಕರು ತೊಂದರೆ ಅನುಭವಿಸಬಾರದು ಎಂಬ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಹತ್ವದ ನಿರ್ಧಾರವನ್ನು ಮಾಡಿದ್ದು, ಜನರಲ್ ಬೋಗಿ  ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಯೋಜನೆ ಒಂದು ತಂದಿದೆ.

ವೀಕ್ಷಕರೆ ಜನರಲ್ ಬೋಗಿ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಇಂದ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಪ್ರಯಾಣಿಕರಿಗೆ ನೀಡೋಕೆ ಮುಂದಾಗಿದೆ. ಇನ್ನು ಮುಂದೆ ಜನರಲ್ ಭೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ. ಜನರಲ್ ಭೋಗಿಗಳ ಪಕ್ಕ ರೈಲ್ವೆ ಇಲಾಖೆ ಸಿಬ್ಬಂದಿ ಊಟ ಇಟ್ಟಿರುತ್ತಾರೆ.  ರೈಲು ಹತ್ತುವಾಗ ಕಡಿಮೆ ದರದಲ್ಲಿ  ಊಟ ಖರೀದಿ ಮಾಡಬಹುದಾಗಿದೆ. ಹಾಗಾದ್ರೆ ಏನೇನು ಊಟ ಇರುತ್ತೆ ಅಂತ ನೋಡೋದಾದ್ರೆ, ಕೇವಲ 20ರೊ ನಲ್ಲಿ 350 ಗ್ರಾ ಪುರಿ ಬಾಜಿ ಹಾಗೂ 50ರೂ ಗೆ 350 ಗ್ರಾ ವೈಟ್ ರೈಸ್, ಚಿತ್ರಾನ್ನ, ಲೆಮನ್ ರೈಸ್ ಜೊತೆಗೆ ಉಪ್ಪಿನಕಾಯಿ ಸಿಗುತ್ತೆ. ಇನ್ನು 3 ರೂ ಗೆ 200 ಎಂ ಎಲ್ ಕುಡಿಯುವ ನೀರು ಸಿಗುತ್ತೆ. ಹೀಗೆ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಮೊದಲ ಹಂತದಲ್ಲಿ  56 ಕಡೆ ಆರಂಭ ಮಾಡಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಸಿಗುತ್ತಿರುವುದರಿಂದ ತುಂಬಾ ಅನುಕೂಲವಾಗುತ್ತಿದೆ. ಎಂದು ಪ್ರಯಾಣಿಕರು ಕೂಡ ಇದಕ್ಕೆ ಹರ್ಷವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಇದನ್ನ ಮುಂದಿನ ದಿನಗಳಲ್ಲಿ ಎಲ್ಲಾ ರೈಲು ನಿಲ್ದಾಣಗಳಿಗೆ ವಿಸ್ತರಿಸಬೇಕು ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ರೈಲ್ವೆ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ