ರಾಜ್ಯ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ಈ ಟೈಮ್ ನಲ್ಲಿ ಮಾತ್ರ ಅಂಗಡಿಗಳು ಓಪನ್ ಆಗಿರಬೇಕು.
ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಲಾಕ್ ಡೌನ್ ಸಡಿಲ ಮಾಡಿರುವುದು ಆರ್ಥಿಕ ಪುನಶ್ಚೇತನಕ್ಕಾಗಿ. ಹಾಗಾಗಿ ಅದು ಸಡಿಲಿಕೆ ಆಗಿದೆ ಎಂದು ಸ್ವೇಚ್ಛಾಚಾರ ಮಾಡಬೇಡಿ. ಮೇ 3 ರವರೆಗೆ ಕಾನೂನು ಪಾಲನೆ ಮಾಡುತ್ತಾ ಜಿಲ್ಲಾಡಳಿತದ ಜೊತೆ ಸಹಕರಿಸಿ ಎಂದಿದ್ದಾರೆ.
ಗ್ರೀನ್ ಝೋನ್ ವ್ಯಾಪ್ತಿಯ ಎಲ್ಲಾ ಕೆಲಸಗಳು ಆರಂಭಗೊಳ್ಳಲಿವೆ. ಆದರೆ ಗ್ರೀನ್ ಝೋನ್ ಎಂದು ಬೇಕಾಬಿಟ್ಟಿ ಓಡಾಡುವಂತಿಲ್ಲ. ಮೇ 3 ರ ತನಕ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಅನಗತ್ಯವಾಗಿ ತಿರುಗಾಡುವ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.