Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದುಡ್ಡು ಕೊಟ್ಟು ಬಂದವ ಡ್ಯಾಂ ಏನಾಗಿದೆ ಅಂತಾ ನೋಡ್ತಾನ: ಕಾಂಗ್ರೆಸ್ ವಿರುದ್ಧ ಗುಡುಗಿದ ಕುಮಾರಸ್ವಾಮಿ

Kumaraswamy

Sampriya

ಬೆಂಗಳೂರು , ಮಂಗಳವಾರ, 13 ಆಗಸ್ಟ್ 2024 (17:01 IST)
ಬೆಂಗಳೂರು: ತುಂಗಭದ್ರಾ ಜಲಾಶಯ ಗೇಟ್​ನ ಚೈನ್​ ಲಿಂಕ್​ ಕಟ್​ ಸಂಬಂಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ ಬೆಂಗಳೂರೊನಲ್ಲಿ ಪ್ರತಿಕ್ರಿಯಿಸಿದ ಅವರು,  ಅಣೆಕಟ್ಟುಗಳ ಸೇಫ್ಟಿ ಮೆಜಾರಿಟಿ ಚೆಕ್ ಮಾಡಲು ಒಂದು ಫಾರ್ಮೇಟ್ ಇರುತ್ತದೆ. ಅದರಂತೆ ಅವರು ಪ್ರತಿಯೊಂದು ವಸ್ತುಗಳನ್ನು ಚೆಕ್ ಮಾಡಬೇಕು.

ಪ್ರತಿವರ್ಷ ಲೂಬ್ರಿಕೇಷನ್ ಮಾಡಬೇಕಾಗುತ್ತದೆ. ಈ ಹಿನ್ನಲೆ ಕೇಂದ್ರ ಸರ್ಕಾರ 2021 ರಲ್ಲಿ ಹೊಸ ಕಾನೂನು ತಂದರು, ಇದರ ಪ್ರಕಾರ ಕೇಂದ್ರ ಸರ್ಕಾರದಿಂದ ಒಬ್ಬ , ರಾಜ್ಯ ಸರ್ಕಾರದಿಂದ ಒಬ್ಬ ಅಧಿಕಾರಿ ಇರುತ್ತಾರೆ. ಇನ್ನೂ ಮುಖ್ಯ ಇಂಜಿನಿಯರ್‌ ಅನ್ನು ನೇಮಕ ಮಾಡಲು ಎಷ್ಟು ಫಿಕ್ಸ್‌ ಮಾಡಿದ್ದಿರಾ ಅದನ್ನ ನಿಲ್ಲಿಸಿ. ಇದನೆಲ್ಲಾ ನಾನು ಅನುಭವಿಸಿದ್ದೇನೆ.

ಎಂಡಿ, ಚೀಫ್ ಇಂಜಿನಿಯರ್​ಗೆ ಇಷ್ಟು ಅಂತಾ ಫಿಕ್ಸ್ ಮಾಡಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ದ ಕಿಡಿಕಾರಿದರು.

ಇನ್ನೂ ದುಡ್ಡು ಕೊಟ್ಟು ಬಂದವನು ಡ್ಯಾಂ ಏನಾಗಿದೆ ಅಂತಾ ನೋಡ್ತಾನ?

70ವರ್ಷವಾಗಿರುವ ತುಂಗಭದ್ರಾ ಡ್ಯಾಂಗೆ ಟಿಬಿ ಬೋರ್ಡ್​ಗೆ ಬರುತ್ತದೆ. ಆಂಧ್ರ, ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ಈ ಕುರಿತು ರಿಪೊರ್ಟ್ ಕೊಡೊದಕ್ಕೆ ಎಂದು ಒಂದು ಕಮಿಟಿ ಇದೆ. 122 ಟಿಎಂಸಿ ನಮ್ಮ ರಾಜ್ಯಕ್ಕೆ ಸಿಗಬೇಕು, 73 ಟಿಎಂಸಿ ನೀರು ಆಂಧ್ರಕ್ಕೆ ಸಿಗಬೇಕು. 103 ಟಿಎಂಸಿ ಈಗ ಸಿಗ್ತಿದೆ. ಇನ್ನು ದುಡ್ಡು ಕೊಟ್ಟು ಬಂದ  ವ್ಯಕ್ತಿ ಡ್ಯಾಂ ಏನಾಗಿದೆ, ಗೇಟ್ ಏನಾಗಿದೆ ಅಂತಾ ಯಾಕೆ ನೋಡ್ತಾನೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೇಲೆ ಆರೋಪ ಮಾಡಿದ್ರೆ ಸಾಲದು, ತನಿಖೆಯನ್ನೂ ಮಾಡಿ: ಸಿದ್ದರಾಮಯ್ಯಗೆ ಸಿಟಿ ರವಿ ಸವಾಲ್