Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕುಮಾರಸ್ವಾಮಿ ಕರಾಳ ಪುಟದಲ್ಲಿ 'ದಾರಿ ತಪ್ಪಿದ್ದು' ಸೇರಿ ಹಲವು ಅಧ್ಯಾಯಗಳು: ಕಾಂಗ್ರೆಸ್ ವ್ಯಂಗ್ಯ

HD Kumaraswamy

Sampriya

ಬೆಂಗಳೂರು , ಸೋಮವಾರ, 12 ಆಗಸ್ಟ್ 2024 (20:32 IST)
ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ  ಕರಾಳ ಇತಿಹಾಸದ ಪುಟಗಳನ್ನು ತೆರೆಯುತ್ತಿದ್ದರೆ ಹಲವು ಬಗೆಯ ಅಧ್ಯಾಯಗಳು ಸಿಗುತ್ತಲೇ ಹೋಗುತ್ತದೆ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.

ಮುಡಾ, ವಾಲ್ಮೀಕಿ ಹಗರಣವನ್ನು ಮುಂದಿಟ್ಟು ವಿಪಕ್ಷಗಳು ನಡೆಸಿದ ಪಾದಯಾತ್ರೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮೇಲೆ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಡಿಕೆಶಿ ಅವರಲ್ಲಿ ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಇಂದು ಎಕ್ಸ್‌ ಖಾತೆಯಲ್ಲಿ ಕುಮಾರಸ್ವಾಮಿ ಅವರ ಹಳೇ ವಿಚಾರಗಳನ್ನು ಪ್ರಸ್ತಾಪಿಸಿ ಕೆಣಕಿದ್ದಾರೆ. ಸದ್ಯ ಡಿಕೆಶಿ ಹಾಗೂ ಎಚ್‌ಡಿಕೆ ಮಧ್ಯೆ ವಾಕ್ಸಮರ ಮುಂದುವರೆದಿದೆ.

ಕಾಂಗ್ರೆಸ್ ಹಂಚಿಕೊಂಡ ಫೋಸ್ಟ್‌ನಲ್ಲಿ ಏನಿದೆ:

ಯೂಟರ್ನ್ ಅಧ್ಯಾಯ,
ಭ್ರಷ್ಟಾಚಾರದ ಅಧ್ಯಾಯ,
ನಂಬಿಕೆ ದ್ರೋಹದ ಅಧ್ಯಾಯ,
ವಂಚನೆಯ ಅಧ್ಯಾಯ,
ದಾರಿ ತಪ್ಪಿದ ಅಧ್ಯಾಯ,
ವಚನಭ್ರಷ್ಟತೆಯ ಅಧ್ಯಾಯ.

ಹೀಗೆ ಹಲವು ಅಧ್ಯಾಯಗಳಲ್ಲಿ ಕರಾಳ ಕತೆಗಳು ತೆರೆದುಕೊಳ್ಳುತ್ತವೆ.

ಕರ್ನಾಟಕದ ಮೇರು ಸಾಹಿತಿ ಯು. ಆರ್ ಅನಂತಮೂರ್ತಿಯವರನ್ನೇ “ಯಾರು“ ಎಂದು ಪ್ರಶ್ನಿಸಿದ್ದ ಕುಮಾರಸ್ವಾಮಿಯವರು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಯಕ್ತಿಕ ಬದುಕಿನ ಬಗ್ಗೆ ಟೀಕಿಸಿದ್ದರು.

ಸಂತೋಷ್ ಹೆಗ್ಡೆಯವರಿಂದ
”ನಾನು ಸೀದಾ ನನ್ನ ಮನೆಗೇ ಹೋಗುತ್ತೇನೆ, ಕುಮಾರಸ್ವಮಿಯವರು ಎಲ್ಲಿ ಹೋಗುತ್ತಾರೆ“ ಎಂಬ ಮಾರ್ಮಿಕ ಹೇಳಿಕೆಯ ತಪರಾಕಿಯನ್ನೂ ಪಡೆದಿದ್ದರು.

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಅವಕಾಶವಾದಿ ಹಾಗೂ ಸ್ಥಿಮಿತವಿಲ್ಲದ ರಾಜಕಾರಿಣಿಯಾದ ಎಚ್ ಡಿ ಕುಮಾರಸ್ವಾಮಿ  ಅವರಿಂದ ಕಾಂಗ್ರೆಸ್ ಪಕ್ಷ ಬುದ್ದಿ ಕಲಿಯುವ ಅಗತ್ಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಗಾಜಾದ ಮೇಲೆ ಎರಗಿದ ಇಸ್ರೇಲ್ ಸೇನೆ, ಹೆಚ್ಚುತ್ತಲೇ ಸಾವಿನ ಸಂಖ್ಯೆ