ರಾಜ್ಯದಲ್ಲಿ ಕೊವಿಡ್19ರ ಪ್ರಕರಣಗಳು ಹೆಚ್ಚಳವಾಗ್ತಿದೆ. ಕಳೆದ 24 ಗಂಟೆಗಳಲ್ಲಿ 1326 ಹೊಸ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ 17,912 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿದು ಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಇದುವರೆಗೆ ದೇಶದಲ್ಲಿ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 4 ಕೋಟಿಯಾಗಿದೆ. ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 0.04 ರಷ್ಟಿದೆ. ಗುಣಮುಖರಾದ ವರ ಪ್ರಮಾಣ 98.78ರಷ್ಟಿದೆ. ಕೊವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕಗೊಳ್ತಿದ್ದು, ಜನರು ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನ ಜಾಗೃತಿಗೊಳ್ಳುವುದರಿಂದ ಮಾತ್ರ ಕೊವಿಡ್ ಅನ್ನು ಹಿಮ್ಮೆಟ್ಟಿಸಬಹುದು.