ಕೋಟೆನಾಡಿನ ಜನರಿಗೆ ಕಳೆದ ಇಪ್ಪತ್ತು ದಿನಗಳಿಂದ ಹೊಸ ಕಿರಿಕಿರಿಯೊಂದು ಶುರುವಾಗಿದೆ.
ಚಿತ್ರದುರ್ಗ ಜಿಲ್ಲೆಯ ಜನರಿಗೆ ರಸ್ತೆ ಕಾಮಗಾರಿಯಿಂದ ಕಿರಿಕಿರಿ ಆರಂಭಗೊಂಡಿದೆ. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಓಬವ್ವ ವೃತ್ತದ ಅಗಲೀಕರಣ ಮತ್ತು ರಸ್ತೆ ಕಾಮಗಾರಿಯು ನಡೆಯುತ್ತಿದೆ. ಕಳೆದ 20 ದಿನಗಳಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.
ಈ ರಸ್ತೆಯಲ್ಲಿ ದಿನಾಲೂ ಡಾಂಬರ್ ಮತ್ತು ಕಾಂಕ್ರಿಟ್ ಹಾಕುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರರಿಗೆ ಅಪಾರ ತೊಂದರೆ ಉಂಟಾಗುತ್ತಿದೆ. ನಗರದ ಬಹಳಷ್ಟು ರಸ್ತೆಗಳನ್ನು ಸೇರುವ ರಸ್ತೆ ಇದಾಗಿದೆ. ಕಾಮಗಾರಿಯು ಬೇಗ ಮುಗಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.