ದೇಶದ ರಾಜಧಾನಿಯಲ್ಲಿರುವ ಮಸೀದಿಯೊಂದು ಕೊರೊನಾ ವೈರಸ್ ಪಸರಿಸುವ ಹಾಟ್ ಸ್ಪಾಟ್ ಆಗಿ ಬದಲಾವಣೆಯಾಗಿದೆ ಎಂದು ಗುರುತಿಸಲಾಗುತ್ತಿದ್ದು, ಮಸೀದಿಯಲ್ಲಿದ್ದವರನ್ನೆಲ್ಲಾ ತೆರವುಗೊಳಿಸಲಾಗಿದೆ.
ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಒಳಗಡೆ ಹಾಗೂ ಹೊರಭಾಗದಲ್ಲಿದ್ದ 2361 ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
ಡಿಸಿಎಂ ಮನೀಶ್ ಸಿಸೋಡಿಯಾ ಈ ಕುರಿತು ಟ್ವಿಟ್ ಮಾಡಿದ್ದು, ಮಸೀದಿಯಲ್ಲಿದ್ದ ಹಾಗೂ ಹೊರಭಾಗದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲದೇ 617 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಉಳಿದ ಎಲ್ಲಾ ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ಈ ಕೆಲಸಕ್ಕೆ ನೆರವಾದ ಸಿಬ್ಬಂದಿ, ಅಧಿಕಾರಗಳ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.