Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋವಿಡ್ ಪರಿಹಾರ ಕಾರ್ಯಾಚರಣೆಗೆ 3 ತಿಂಗಳ ವೇತನ ನೀಡಿದ ಸಚಿವ

ಕೋವಿಡ್ ಪರಿಹಾರ ಕಾರ್ಯಾಚರಣೆಗೆ 3 ತಿಂಗಳ ವೇತನ ನೀಡಿದ ಸಚಿವ
ಬೀದರ , ಬುಧವಾರ, 1 ಏಪ್ರಿಲ್ 2020 (19:28 IST)
ಕೋವಿಡ್ – 19 ಪರಿಹಾರ ಕಾರ್ಯಾಚರಣೆಗೆ ಕೈಗೊಳ್ಳಲು ಸಿಎಂ ಪರಿಹಾರ ನಿಧಿಗೆ ಸಚಿವರೊಬ್ಬರು ತಮ್ಮ ಮೂರು ತಿಂಗಳ ವೇತನ ನೀಡಿದ್ದಾರೆ.

ಮುಖ್ಯಮಂತ್ರಿಗಳ ಕೋರಿಕೆಯ ಬೆನ್ನಲ್ಲೇ ರಾಜ್ಯದ ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಅವರು ತಮ್ಮ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋರೊನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲ ದೇಶಗಳು ಹರಸಾಹಸ ಪಡುತ್ತಿವೆ. ಅನೇಕ ದೇಶಗಳು ಭಾರತದಂತೆಯೇ ತಮ್ಮ ತಮ್ಮ ದೇಶಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಿವೆ. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಮತ್ತು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲು ಹಾಗೂ ಲಾಕ್‌ಡೌನ್ ನಿಂದ ಅನಾನುಕೂಲ ಉಂಟಾದ ಜನರಿಗೆ ಸಹಾಯ ಮಾಡಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ಮಹಾಜನತೆಯ ಸಹಕಾರ ಕೋರಿದ್ದಾರೆ. ಅದರಂತೆ ತಾವು ಸಿಎಂ ಅವರ ಪರಿಹಾರ ನಿಧಿಗೆ ವೇತನ ನೀಡುತ್ತಿರುವುದಾಗಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಎಫ್ ಐ ಆರ್